ರಾಷ್ಟ್ರೀಯ
'ರಾಷ್ಟ್ರಗೀತೆಗೆ ಅವಮಾನ' ಆರೋಪ: ಮಮತಾ ಬ್ಯಾನರ್ಜಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಬಿಜೆಪಿ ನಾಯಕರು

ಮುಂಬೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವಾಗ ರಾಷ್ಟ್ರಗೀತೆ ಹಾಡಿದರು ಹಾಗೂ ಆ ನಂತರ ನಿಂತುಕೊಂಡು ರಾಷ್ಟ್ರಗೀತೆ ಹಾಡುವುದನ್ನು ತಟ್ಟನೆ ಅರ್ಧಕ್ಕೆ ನಿಲ್ಲಿಸಿದರು ಎಂದು ಆರೋಪಿಸಿ ಮುಂಬೈನಲ್ಲಿ ಬಿಜೆಪಿ ನಾಯಕರೊಬ್ಬರು ದೂರು ದಾಖಲಿಸಿದ್ದಾರೆ.
ವಾಣಿಜ್ಯ ರಾಜಧಾನಿಗೆ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ ವರಿಷ್ಠರು, ಮಂಗಳವಾರ ಶಿವಸೇನಾ ನಾಯಕರ ನಂತರ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು.
ಬ್ಯಾನರ್ಜಿಯವರು 'ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವ ತೋರಿಸಿದ್ದಾರೆ' ಎಂದು ದೂರುದಾರರು ಆರೋಪಿಸಿದ್ದಾರೆ. 'ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ, 1971 ಹಾಗೂ @HMOIndia 2015 ರ ಆದೇಶದ ಅಡಿಯಲ್ಲಿ ಇದು ಅಪರಾಧವಾಗಿದೆ" ಎಂದು ವಿವೇಕಾನಂದ ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ.
ಇತರ ನಾಯಕರು ಕೂಡ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರದ ಬಿಜೆಪಿ ನಾಯಕ ಪ್ರತೀಕ್ ಕರ್ಪೆ ಘಟನೆಯನ್ನು ಅವಹೇಳನಕಾರಿ ಎಂದು ಕರೆದರೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇದು "ಸಾಂವಿಧಾನಿಕ ಪ್ರಾಧಿಕಾರದಿಂದ ಶೋಚನೀಯ ನಡವಳಿಕೆ" ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಮಮತಾ ರಾಷ್ಟ್ರಗೀತೆಯನ್ನು ಥಟ್ಟನೆ ಮುಗಿಸುತ್ತಿರುವುದನ್ನು ಕಾಣಬಹುದು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಅವರು, ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು. ಆದರೆ ಮಧ್ಯದಲ್ಲಿ ನಿಲ್ಲಿಸಿ 'ಜೈ ಮಹಾರಾಷ್ಟ್ರ' ಎಂದು ಹೇಳಿ ಮುಗಿಸಿದರು.
ಇಂದು ಮುಖ್ಯಮಂತ್ರಿಯಾಗಿ ಅವರು ಬಂಗಾಳದ ಸಂಸ್ಕೃತಿ, ರಾಷ್ಟ್ರಗೀತೆ ಮತ್ತು ದೇಶವನ್ನು ಹಾಗೂ ಗುರುದೇವ್ ರವೀಂದ್ರನಾಥ ಟ್ಯಾಗೋರ್!" ಅವಮಾನಿಸಿದ್ದಾರೆ. ಎಂದು ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಬ್ಯಾನರ್ಜಿ ರಾಷ್ಟ್ರಗೀತೆಯನ್ನು ಹಾಡುತ್ತಿರುವ 16 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡಿದೆ.
Here we have a Chief Minister, who fails to respect our National Anthem.
— Tejasvi Surya (@Tejasvi_Surya) December 1, 2021
Expecting the opposition parties to respect Bharat & it's values is a lot to ask for these days.
This deplorable behaviour from a Constitutional Authority is extremely shameful & condemnable. pic.twitter.com/pamYZqAZEo
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ