varthabharthi


ಕರ್ನಾಟಕ

ಮಾನವ ಹಕ್ಕುಗಳ ಪ್ರತಿಪಾದಕ ಪ್ರವಾದಿ: ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

ವಾರ್ತಾ ಭಾರತಿ : 2 Dec, 2021

ಬೆಂಗಳೂರು: 'ರೇಡಿಯೋ ಎಚ್.ಆರ್.ಡಿ.ಎಫ್ ಕರ್ನಾಟಕ' ಮಿಥ್ಯ ಅಳಿಸಿದ ಸತ್ಯ ಪ್ರವಾದಿ (ಸ ) ಇದರ ಪ್ರಯುಕ್ತ ಮಾನವ ಹಕ್ಕುಗಳ ಪ್ರತಿಪಾದಕ ಪ್ರವಾದಿ (ಸ ) ಎಂಬ ವಿಷಯದ ಕುರಿತ ಮುಸ್ಲಿಮೇತರ ಬಂಧುಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. 

ನವೀನ್ ಆರ್ ಭಟ್  ಕುಕ್ಕುಜೆ ಕಾರ್ಕಳ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನ ವನ್ನು ಮುತ್ತುರಾಜ್ ಎ. ಆರ್ ತುಮಕೂರು ಮತ್ತು ತೃತೀಯ ಸ್ಥಾನವನ್ನು ಎಸ್.ಎಲ್ ವರಲಕ್ಷ್ಮಿ ಮಂಜುನಾಥ್ ಪಡೆದಿದ್ದಾರೆ. ಗುಣವತಿ ಧರ್ಮಸ್ಥಳ, ಡಾ.ಕೆ ಗೋವಿಂದ ಭಟ್ ಮತ್ತು ಶಾರದಾ ನಾಯ್ಕ್ ಶಾರದಾ ನಾಯ್ಕ್ ಭಟ್ಕಳ ಈ ಮೂವರು ತೀರ್ಪುಗಾರರ ಮೆಚ್ಚುಗೆ ಪಡೆದ ಬರಹ  ಎಂಬ ಕಾರಣದಿಂದ ಪ್ರೋತ್ಸಾಹ ಬಹುಮಾನವನ್ನು ಘೋಷಿಸಲಾಗಿದೆ ಎಂದು ಸ್ಪರ್ಧೆಯ ನಿರ್ವಾಹಕ ಮೊಹಮ್ಮದ್ ರಿಯಾಝ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)