varthabharthi


ರಾಷ್ಟ್ರೀಯ

ನಿರುದ್ಯೋಗಿ ಯುವಕರು ಎಷ್ಟು ದಿನ ತಾಳ್ಮೆಯಿಂದಿರಬೇಕು: ಬಿಜೆಪಿ ಸಂಸದ ವರುಣ್ ಗಾಂಧಿ ಪ್ರಶ್ನೆ

ವಾರ್ತಾ ಭಾರತಿ : 2 Dec, 2021

ವರುಣ್ ಗಾಂಧಿ (PTI)

ಹೊಸದಿಲ್ಲಿ: ಯುವಕರಿಗೆ ಸರಕಾರಿ ಉದ್ಯೋಗಾವಕಾಶಗಳ ಕೊರತೆಯನ್ನು ಎತ್ತಿ ತೋರಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಯುವಕರು ಎಷ್ಟು ದಿನ ತಾಳ್ಮೆಯಿಂದಿರಬೇಕು, ಹತಾಶೆಯ ಭಾವವು ಅವರಲ್ಲಿ ಹರಿಯುತ್ತಿದೆ ಎಂದು ಹೇಳಿದರು.

‘‘ಮೊದಲಿಗೆ, ಸರಕಾರಿ ಕೆಲಸವೇ ಇಲ್ಲ.. ಇನ್ನೂ ಸ್ವಲ್ಪ ಅವಕಾಶ ಬಂದರೆ ಜೊತೆಗೆ ಪೇಪರ್ ಸೋರಿಕೆಯಾಗುತ್ತದೆ. ಪರೀಕ್ಷೆ ತೆಗೆದುಕೊಂಡರೆ ವರ್ಷಗಳ ಕಾಲ ಯಾವುದೇ ಫಲಿತಾಂಶವಿಲ್ಲ ಅಥವಾ ಕೆಲವು ಹಗರಣದ ಕಾರಣ ಅದನ್ನು ರದ್ದುಗೊಳಿಸಲಾಗಿದೆ. 1.25 ಕೋಟಿಗೂ ಹೆಚ್ಚು ಮಂದಿ ರೈಲ್ವೇ ಗ್ರೂಪ್ ಡಿ ಉದ್ಯೋಗದ ಫಲಿತಾಂಶಕ್ಕಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಸೇನಾ ನೇಮಕಾತಿಯ ವಿಷಯದಲ್ಲೂ ಇದೇ ಆಗಿದೆ. ಭಾರತದ ಯುವಕರು ಎಲ್ಲಿಯವರೆಗೆ ತಾಳ್ಮೆಯಿಂದಿರಬೇಕು?" ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)