varthabharthi


ಕರಾವಳಿ

ಆಳ್ವಾಸ್ ನುಡಿಸಿರಿ ಮುಂದೂಡಿಕೆ

ವಾರ್ತಾ ಭಾರತಿ : 2 Dec, 2021

ಮೂಡುಬಿದಿರೆ, ಡಿ.2: ಈ ತಿಂಗಳ 31, ಜನವರಿ 1 ಮತ್ತು 2ರಂದು ನಡೆಯಬೇಕಿದ್ದ 'ಆಳ್ವಾಸ್ ನುಡಿಸಿರಿ' ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಮುಂದೂಡಲಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸಲು ಸರಕಾರ ನಿರ್ಬಂಧ ವಿಧಿಸಿರುವುದರಿಂದ ಡಿ.31, ಜನವರಿ 1 ಮತ್ತು 2ರಂದು ನಡೆಯಬೇಕಾಗಿದ್ದ 'ಆಳ್ವಾಸ್ ನುಡಿಸಿರಿ' ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ.ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)