varthabharthi


ರಾಷ್ಟ್ರೀಯ

ಬಾಲಿವುಡ್ ನಟ ಬ್ರಹ್ಮ ಮಿಶ್ರಾ ಫ್ಲ್ಯಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ವಾರ್ತಾ ಭಾರತಿ : 2 Dec, 2021


ಬ್ರಹ್ಮ ಮಿಶ್ರಾ (Photo: Twitter/@ani_digital)

ಮುಂಬೈ: ಮಾಂಝಿ: ದಿ ಮೌಂಟೇನ್ ಮ್ಯಾನ್, ಕೇಸರಿ ಹಾಗೂ ವೆಬ್ ಸರಣಿ ಮಿರ್ಝಾಪುರದಂತಹ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಚಲನಚಿತ್ರ ನಟ ಬ್ರಹ್ಮ ಮಿಶ್ರಾ ಮುಂಬೈನ ವರ್ಸೋವಾ ಫ್ಲ್ಯಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ ಎಂದು Mid-day ಪತ್ರಿಕೆ ವರದಿ ಮಾಡಿದೆ.

ಗುರುವಾರ ಪೊಲೀಸರು ವರ್ಸೋವಾದಲ್ಲಿನ ಮಿಶ್ರಾ ಅವರ ಫ್ಲ್ಯಾಟ್‌ನಿಂದ ಅರೆ ಕೊಳೆತ ದೇಹವನ್ನು ಪತ್ತೆ ಮಾಡಿದರು. ಮೃತದೇಹವನ್ನು ಡಾ.ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

Mid-day ಮೂಲಗಳ ಪ್ರಕಾರ ಮಿಶ್ರಾ 2-3 ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ. ಕೊಳೆತ ಮೃತದೇಹದಿಂದ ದುರ್ವಾಸನೆ ಬರಲಾರಂಭಿಸಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವರ್ಸೋವಾ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಫ್ಲ್ಯಾಟ್‌ನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ತೆರೆದ ಪೊಲೀಸರಿಗೆ ಶೌಚಾಲಯದಲ್ಲಿ ಮಿಶ್ರಾ ಮೃತದೇಹ ಪತ್ತೆಯಾಗಿದೆ. ಪಂಚನಾಮವನ್ನು ನಿರ್ವಹಿಸಿದ ನಂತರ ಶವಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)