varthabharthi


ಕರಾವಳಿ

ವಿದ್ಯಾರ್ಥಿವೇತನ: ಅವಧಿ ವಿಸ್ತರಣೆ

ವಾರ್ತಾ ಭಾರತಿ : 2 Dec, 2021

ಉಡುಪಿ, ಡಿ.2: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸರಕಾರಿ, ಅನುದಾನಿತ ಮತುತಿ ಮಾನ್ಯತೆ ಪಡೆದ ಶಾಲೆ ಹಾಗೂ ಕಾಲೇಜು ಗಳಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು, ರಾಷ್ಟೀಯ ವಿದ್ಯಾರ್ಥಿವೇತನ ಪೋರ್ಟಲ್(ಎನ್.ಎಸ್.ಪಿ)ನಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿವೇತಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿ.15ರ ವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಥಿವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ https://dom.karnataka.gov.in/udupi/public ಅಥವಾ ಉಡುಪಿ ದೂರವಾಣಿ ಸಂಖ್ಯೆ: 0820- 2574596, ಕುಂದಾಪುರ ದೂರವಾಣಿ ಸಂಖ್ಯೆ: 08254-230370 ಹಾಗೂ ಕಾರ್ಕಳ ದೂರವಾಣಿ ಸಂಖ್ಯೆ: 08258-231101, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)