varthabharthi


ಕರಾವಳಿ

ಪಾವಂಜೆ: ಮಿನಿ ಟೆಂಪೋ ಪಲ್ಟಿ

ವಾರ್ತಾ ಭಾರತಿ : 2 Dec, 2021

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ  ಪಾವಂಜೆ ಜಂಕ್ಷನ್ ಬಳಿ ಮಿನಿ ಟೆಂಪೋ ಟಯರ್ ಸ್ಫೋಟಗೊಂಡು ಪಲ್ಟಿಯಾಗಿದ್ದು ಚಾಲಕ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗಾಯಾಳು ಚಾಲಕನನ್ನು ಭಟ್ಕಳ ನಿವಾಸಿ ಸುಧಾಕರ ಕಾಮತ್ ಎಂದು ಗುರುತಿಸಲಾಗಿದೆ.

ಭಟ್ಕಳದಿಂದ ಮಂಗಳೂರು ಕಡೆಗೆ ಪಾಮ್ ಆಯಿಲ್ ಹೇರಿಕೊಂಡು ಬರುತ್ತಿದ್ದ ಮಿನಿ ಟೆಂಪೋ ಪಾವಂಜೆ ಜಂಕ್ಷನ್ ತಲುಪುತ್ತಿದ್ದಂತೆ ಹಿಂದಿನ ಟಯರ್ ಸ್ಪೋಟಗೊಂಡು ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಟೆಂಪೋ ಜಖಂಗೊಂಡಿದ್ದು ಚಾಲಕ ಸುಧಾಕರ ಕಾಮತ್ ಹಾಗೂ ಟೆಂಪೋದಲ್ಲಿದ್ದ ರಮೇಶ್ ಎಂಬವರು  ಅಲ್ಪಸ್ವಲ್ಪ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಗೊಂಡಿದ್ದು ಕೂಡಲೇ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ಭೇಟಿ  ನೀಡಿ ಪರಿಶೀಲನೆ ನಡೆಸಿ ಕ್ರೇನ್ ಮೂಲಕ ವಾಹನವನ್ನು ತೆರವುಗೊಳಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)