varthabharthi


ಕರಾವಳಿ

ಕಾಂಗ್ರೆಸ್ ಮುಖಂಡ ಶಂಭು ಪೂಜಾರಿ ನಿಧನ

ವಾರ್ತಾ ಭಾರತಿ : 2 Dec, 2021

ಕೋಟ, ಡಿ.2: ಕೋಟ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಬಿಲ್ಲವ ಸಮುದಾಯದ ಮುಖಂಡ ಹಾಗೂ ಉದ್ಯಮಿ ಪಾರಂಪಳ್ಳಿ ಶಂಭು ಪೂಜಾರಿ (61) ಗುರುವಾರ ಅನಾರೋಗ್ಯದಿಂದ ನಿಧನರಾದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ 2 ಬಾರಿ ಸದಸ್ಯರಾಗಿ ಚುನಾಯಿತ ರಾಗಿ ವಿಪಕ್ಷ ನಾಯಕನಾಗಿದ್ದ ಇವರು, ಸಾಲಿಗ್ರಾಮ ಪುರಸಭೆ ಸದಸ್ಯರಾಗಿ, ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಾಜಿ ನಿರ್ದೇಶಕರಾಗಿ, ಕೋಟ ನಾರಾಯಣಗುರು ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಸಾಲಿಗ್ರಾಮ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ನಿ ಉಡುಪಿ ಜಿಪಂನ ಮಾಜಿ ಸದಸ್ಯೆಯಾಗಿದ್ದ ಗೀತಾ ಶಂಭು ಪೂಜಾರಿ, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)