varthabharthi


ರಾಷ್ಟ್ರೀಯ

ಕೋಲ್ಕತ್ತಾದಲ್ಲಿ ಉದ್ಯಮಿ ಗೌತಮ್ ಅದಾನಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ವಾರ್ತಾ ಭಾರತಿ : 2 Dec, 2021

Photo: twitter

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಕೋಲ್ಕತ್ತಾದ ರಾಜ್ಯ ಸಚಿವಾಲಯ 'ನಬನ್ನಾ'ದಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿಯಾದರು.

ಪಶ್ಚಿಮ ಬಂಗಾಳದಲ್ಲಿ ಅದಾನಿಯ ವಿಶಾಲ ವ್ಯಾಪಾರ ಸಾಮ್ರಾಜ್ಯದ ಹೂಡಿಕೆಯ ಆಯ್ಕೆಗಳನ್ನು ಇಬ್ಬರೂ ಚರ್ಚಿಸಿದರು ಎಂದು ತಿಳಿದುಬಂದಿದೆ.

ಮುಂದಿನ ವರ್ಷ ಎಪ್ರಿಲ್‌ನಲ್ಲಿ ಬೆಂಗಾಳ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ಅದಾನಿ ದೃಢಪಡಿಸಿದರು.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಇಬ್ಬರ ಸಭೆ ಒಂದೂವರೆ ಗಂಟೆಗಳ ಕಾಲ ನಡೆಯಿತು.

“ಮಾನ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಸಂತೋಷವಾಯಿತು. ವಿವಿಧ ಹೂಡಿಕೆ ಸನ್ನಿವೇಶಗಳು ಹಾಗೂ  ಪಶ್ಚಿಮ ಬಂಗಾಳದ ಪ್ರಬಲ ಸಾಮರ್ಥ್ಯವನ್ನು ಚರ್ಚಿಸಲಾಗಿದೆ. ನಾನು ಎಪ್ರಿಲ್ 2022 ರಲ್ಲಿ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಗೆ (ಬಿಜಿಬಿಎಸ್) ಹಾಜರಾಗಲು ಎದುರು ನೋಡುತ್ತಿದ್ದೇನೆ’’ಎಂದು ಅದಾನಿ ಟ್ವೀಟಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)