varthabharthi


ಕರಾವಳಿ

ಪ್ರತ್ಯೇಕ ಪ್ರಕರಣ: ಗಾಂಜಾ ಸೇವಿಸುತ್ತಿದ್ದ ನಾಲ್ವರ ಸೆರೆ

ವಾರ್ತಾ ಭಾರತಿ : 2 Dec, 2021

ಮಂಗಳೂರು, ಡಿ.2: ಕಾವೂರು ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಪ್ರತ್ಯೇಕ ಗಾಂಜಾ ಸೇವನೆಗೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಗುರುವಾರ ಬಂಧಿಸಿದ್ದಾರೆ.

ಮೂಡುಶೆಡ್ಡೆ ಸ್ಮಶಾನದ ಬಳಿ ಗುರುವಾರ ಬೆಳಗ್ಗೆ 10:30ಕ್ಕೆ ಗಾಂಜಾ ಸೇವಿಸುತ್ತಿದ್ದ ಅಲ್ಥಾಫ್ (36) ಎಂಬಾತನನ್ನು ಬಂಧಿಸಲಾಗಿದೆ.

ಉರುಂದಾಡಿ ಗುಡ್ಡೆಯ ಧನುಷ್ ಮೈದಾನದ ಬಳಿ ಗುರುವಾರ ಬೆಳಗ್ಗೆ 11ಕ್ಕೆ ಗಾಂಜಾ ಸೇವನೆ ಮಾಡುತ್ತಿದ್ದ ಚರಣ್‌ ರಾಜ್ (21) ಎಂಬಾತನನ್ನು ಬಂಧಿಸಲಾಗಿದೆ. ಉರುಂದಾಡಿ ಗುಡ್ಡೆಯ ರಾಘವೇಂದ್ರ ಮಠದ ಬಳಿ ಗುರುವಾರ ಮಧ್ಯಾಹ್ನ 12:15ಕ್ಕೆ ಗಾಂಜಾ ಸೇವನೆ ಮಾಡುತ್ತಿದ್ದ ಸುರೇಶ್ (25) ಎಂಬಾತನನ್ನು ಬಂಧಿಸಲಾಗಿದೆ. ಕಾವೂರು ಠಾಣೆಯ ಹರೀಶ್ ಎಚ್.ವಿ. ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ನಗರದ ಪಂಪ್‌ವೆಲ್ ಬಳಿ ಗುರುವಾರ ಗಾಂಜಾ ಸೇವನೆ ಮಾಡುತ್ತಿದ್ದ ವಳಚಿಲ್‌ನ ಕೌಶಿಕ್ ನಿಹಾಲ್ (24) ಎಂಬಾತನನ್ನು ಕಂಕನಾಡಿ ನಗರ ಠಾಣೆಯ ಎಸ್ಸೈ ಕೃಷ್ಣ ಬಿ. ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)