varthabharthi


ಕರಾವಳಿ

ಎಸ್ ವೈ ಎಸ್ ಉಳ್ಳಾಲ ಸೆಂಟರ್ : ಮುಹ್ಯಿದ್ದೀನ್ ಮೌಲಿದ್ ಮಜ್ಲಿಸ್, ಬಡತನ ವೇತನ ಉದ್ಘಾಟನಾ ಕಾರ್ಯಕ್ರಮ

ವಾರ್ತಾ ಭಾರತಿ : 2 Dec, 2021

ಉಳ್ಳಾಲ: ಎಸ್ ವೈ ಎಸ್ ಉಳ್ಳಾಲ ಸೆಂಟರ್ ವತಿಯಿಂದ ಮುಹ್ಯಿದ್ದೀನ್ ಮೌಲಿದ್ ಮಜ್ಲಿಸ್ ಮತ್ತು ಮಾಸಿಕ ಬಡತನ ವೇತನ ಉದ್ಘಾಟನಾ ಕಾರ್ಯಕ್ರಮ ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಇವರ ನೇತ್ರತ್ವದಲ್ಲಿ ಆಝಾದ್ ನಗರದ ಇಸ್ಲಾಮಿಕ್ ನೋಲೇಜ್ ಸೆಂಟರಿನಲ್ಲಿ ನಡೆಯಿತು.

ಮಾಸಿಕ ಬಡತನ ವೇತನ ಚಾಲನಾ ಕಾರ್ಯಕ್ರಮವನ್ನು ಯೂಸುಫ್ ಮದನಿ ಸುಂದರಬಾಗ್ ಉದ್ಘಾಟಿಸಿದರು. ಸೆಂಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಬಡತನ ವೇತನದ ಕುರಿತು ಮಾಹಿತಿ ನೀಡಿ ಮಾತನಾಡಿದರು. ಸೆಂಟರ್ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ದಅವಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಧನ್ಯವಾದಗೈದರು.

ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್, ಇಸಾಬಃ ಕಾರ್ಯದರ್ಶಿ ಎಸ್.ಎಂ ಶರೀಫ್ ಹಾಗು ಸೆಂಟರ್ ಕಾರ್ಯಕಾರಿ ಸಮಿತಿ ನಾಯಕರು, ಸದಸ್ಯರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)