varthabharthi


ಕರಾವಳಿ

ಮಂಗಳೂರು; ಯುವಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣ: ಮೂವರು ವಶಕ್ಕೆ

ವಾರ್ತಾ ಭಾರತಿ : 2 Dec, 2021

ಮಂಗಳೂರು, ಡಿ.2: ನಗರದಲ್ಲಿ ನಡೆಯುತ್ತಿದ್ದ ಗ್ಯಾಂಗ್‌ವಾರ್‌ನ ಮುಂದುವರಿದ ಭಾಗವಾಗಿ ತಂಡವೊಂದು ಕಳೆದ ಶನಿವಾರ ರಾತ್ರಿ‌ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ‌ಉರ್ವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನವನೀತ್, ಹೇಮಂತ್, ದೀಕ್ಷಿತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 8 ಮಂದಿಯನ್ನು ‌ಒಳಗೊಂಡ ತಂಡವು ಹಲ್ಲೆ ನಡೆಸಿದ್ದರಿಂದ ಶ್ರವಣ್ (30) ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕಳೆದ ವರ್ಷ ಬೋಳೂರಿನ ತಲ್ವಾರ್ ಜಗ್ಗ ಗ್ಯಾಂಗ್ ಇಂದ್ರಜಿತ್ ಎಂಬಾತನ ಕೊಲೆಗೈದಿತ್ತು. ಅದಕ್ಕೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)