ಪುನೀತ್ ರಾಜ್ ಕುಮಾರ್ ಅವರ ಕನಸಿನ ಯೋಜನೆ 'ಗಂಧದ ಗುಡಿ' ಟೀಸರ್ ಬಿಡುಗಡೆ
'ಗಂಧದ ಗುಡಿ' ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಕನಸಿನ ಯೋಜನೆ ಎಂದೇ ಹೇಳಲಾದ 'ಗಂಧದ ಗುಡಿ' ಸಾಕ್ಷ್ಯ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.
ಪಿಆರ್.ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಇಂದು 10 ಗಂಟೆಗೆ ಟೇಸರ್ ಬಿಡುಗಡೆ ಕಂಡಿದ್ದು, ಕರ್ನಾಟಕದ ಅರಣ್ಯ, ವನ್ಯ ಜೀವಿ ಹಾಗೂ ಪ್ರಕೃತಿ ಸೌಂದರ್ಯವನ್ನು ವರ್ಣಿಸುವ ಈ ಸಾಕ್ಷ್ಯಚಿತ್ರವು 2022ರಲ್ಲಿ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
''ಅಪ್ಪು ಅವರ ಕನಸಿದು, ಅದ್ಭುತ ಪಯಣ ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ ಮರುಕಳಿಸಿದ ಚರಿತ್ರೆಯಿದು – ಗಂಧದ ಗುಡಿ'' ಎಂದು ಪಿಆರ್.ಕೆ ಆಡಿಯೋ ಯೂಟ್ಯೂಬ್ ಚಾನೆಲ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
'ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ' ಟೈಟಲ್ ಟೀಸರ್ ಡಿಸೆಂಬರ್ 6ಕ್ಕೆ ಬಿಡುಗಡೆಯಾಗಲಿದೆ ಎಂದು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಟ್ವಿಟರ್ ನಲ್ಲಿ ಇತ್ತೀಚೆಗೆ ತಿಳಿಸಿದ್ದರು.
Appu’s dream, an incredible journey. It's time for the return - "Gandhada Gudi"
— PRK Audio Official (@PRKAudio) December 6, 2021
ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ”https://t.co/CmjLesTxBr#GandhadaGudi @PuneethRajkumar @ashwinipuneet @amoghavarsha @PRK_Productions