varthabharthi


ಕರ್ನಾಟಕ

ಬೆಂಗಳೂರಿನ ಕಾಂಗ್ರೆಸ್ ಎಂಎಲ್‍ಸಿ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಎಫ್‍ಐಆರ್ ದಾಖಲು

ವಾರ್ತಾ ಭಾರತಿ : 9 Dec, 2021

photo- @twitter.com (ಕೆಜಿಎಫ್ ಬಾಬು)

ಬೆಂಗಳೂರು, ಡಿ.9: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಬೆಂಗಳೂರು ಮಹಾನಗರ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಶರೀಫ್ (ಕೆ.ಜಿ.ಎಫ್.ಬಾಬು) ಅವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಯೂಸುಫ್ ಶರೀಫ್ ಅವರು ನನ್ನನ್ನು ಗೆಲ್ಲಿಸಿದರೆ 5,000 ರೂ., 10 ಸಾವಿರ ರೂ., 50 ಸಾವಿರ ರೂ., ಒಂದು ಲಕ್ಷ ರೂ. ಜೀವವಿಮೆ ಲೆಕ್ಕದಲ್ಲಿ ತಲಾ 5 ಲಕ್ಷ ರೂ. ಹೀಗೆ 500 ಕೋಟಿ ರೂ.ಗೂ ಅಧಿಕ ಹಣವನ್ನು ನಿಮಗೆ ಕೊಡುತ್ತೇನೆ ಎಂದು ಮತದಾರರಿಗೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಈ ರೀತಿ ತಿಳಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಯಲಹಂಕದ ತಹಶೀಲ್ದಾರ್ ಅವರ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ.

ಅತ್ತಿಬೆಲೆ ಠಾಣೆಯಲ್ಲಿ ಕೂಡ ಇನ್ನೊಂದು ಎಫ್‍ಐಆರ್ ದಾಖಲಾಗಿದೆ. ಕ್ಷೇತ್ರದ ಜನರ ಸಂಕಷ್ಟಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ 500 ಕೋಟಿ ರೂ. ಹಣವನ್ನು ನೀಡುವುದಾಗಿ ಯೂಸುಫ್ ಶರೀಫ್ ಮಾಧ್ಯಮ ಪ್ರತಿನಿಧಿಗಳ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಎಫ್‍ಐಆರ್ ದಾಖಲಾಗಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)