varthabharthi


ಗಲ್ಫ್ ಸುದ್ದಿ

ಅಫ್ಘಾನ್ ಗೆ ಸೌದಿ ಅರೇಬಿಯಾದ ಮಾನವೀಯ ನೆರವು ರವಾನೆ

ವಾರ್ತಾ ಭಾರತಿ : 1 Jan, 2022

ಸಾಂದರ್ಭಿಕ ಚಿತ್ರ:PTI

ದುಬೈ, ಜ.1: ಸೌದಿ ಅರೇಬಿಯಾದ ಕಿಂಗ್ ಸಲ್ಮಾನ್ ಹ್ಯುಮಾನಿಟೇರಿಯನ್ ಏಯ್ಡ್ ಆ್ಯಂಡ್ ರಿಲೀಫ್ ಸೆಂಟರ್(ಕೆಎಸ್ ರಿಲೀಫ್)ನಿಂದ 7 ಟನ್ ಮತ್ತು 400 ಕಿ.ಗ್ರಾಂ. ಆಹಾರ ಚೀಲಗಳು ಹಾಗೂ 200 ಶೆಲ್ಟರ್ ಬ್ಯಾಗ್ ಗಳನ್ನು ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ರೂಪದಲ್ಲಿ ರವಾನಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.

ಈ ಹಿಂದೆ ಡಿಸೆಂಬರ್ ನಲ್ಲಿ ಸೌದಿ ಅರೇಬಿಯಾವು ಅಫ್ಘಾನಿಸ್ತಾನಕ್ಕೆ 65 ಟನ್ ತೂಕದ 1,647 ಆಹಾರ ಚೀಲಗಳು ಹಾಗೂ 746 ಕಿ.ಗ್ರಾಂ ತೂಕದ 192 ಶೆಲ್ಟರ್ ಬ್ಯಾಗ್ ಗಳನ್ನು ಮಾನವೀಯ ನೆರವಿನ ರೂಪದಲ್ಲಿ 2 ವಿಮಾನಗಳ ಮೂಲಕ ರವಾನಿಸಿತ್ತು ಎಂದು ವರದಿ ಹೇಳಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)