varthabharthi


ಮಾಹಿತಿ - ಮಾರ್ಗದರ್ಶನ

ಸಂಶೋಧನಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ವಾರ್ತಾ ಭಾರತಿ : 3 Jan, 2022

ಬೆಂಗಳೂರು, ಜ. 3: ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅಲ್ಪ ಮೊತ್ತದ ಅನುದಾನ ಯೋಜನೆಯಡಿ ವಿಜ್ಞಾನ ಸಂವಹನ ಕಾರ್ಯಾಗಾರ, ಗೋಷ್ಠಿ ಸಂವಾದ ಮತ್ತು ವಿಜ್ಞಾನ ದಿನಾಚರಣೆ ಆಯೋಜನೆಗೆ ಸಹಾಯಾನುದಾನ ಹಾಗೂ ಅಲ್ಪಾವಧಿ ಸಂಶೋಧನೆ ಮತ್ತು ಅಧ್ಯಯನಕ್ಕೆ ಅನುದಾನ ನೀಡಲು ವಿವಿಧ ವಿಶ್ವವಿದ್ಯಾಲಯ, ಕಾಲೇಜು, ಶಿಕ್ಷಣ, ವೈಜ್ಞಾನಿಕ ಸಂಸ್ಥೆಗಳ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರುಗಳು ಹಾಗೂ ವಿಜ್ಞಾನಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಜ.21 ಕೊನೆಯ ದಿನವಾಗಿದೆ. ಅಲ್ಪ ಮೊತ್ತದ ಅನುದಾನ 50ಸಾವಿರ ರೂ., ಅಲ್ಪಾವಧಿ ಅಧ್ಯಯನ 1ಲಕ್ಷ ರೂ. ನಿಗದಿಪಡಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿ ವೆಬ್‍ಸೈಟ್ www.kstacademy.in ನಲ್ಲಿ ಪಡೆಯಬಹುದು ಎಂದು ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)