varthabharthi


ವೈವಿಧ್ಯ

ನಾನೊಬ್ಬ ಮುಸ್ಲಿಮ್ ಮಹಿಳೆ

ವಾರ್ತಾ ಭಾರತಿ : 8 Jan, 2022
ಮೌಮಿತಾ ಆಲಂ | ಅನು: ಶಿವಸುಂದರ್

ನಾನೊಬ್ಬ ಮುಸ್ಲಿಂ ಮಹಿಳೆ

ನಾನು ಹರಾಜಿಗಿಲ್ಲ...

ನಾನೂ ಪ್ರಾಣತ್ಯಾಗ ಮಾಡಿದ್ದೇನೆ

ಈ ದೇಶದ ಆಝಾದಿಗೆ

ಬ್ರಿಟಿಷರ ವಿರುದ್ಧ ಸೆಣೆಸಿದ್ದೇನೆ..

ನಾನು ಶಹೀನ್ ಬಾಗ್

ನಾನು..

ಕಾಶ್ಮೀರದಲ್ಲಿ ಮಣಿಪುರದಲ್ಲಿ

ನಿಮ್ಮನ್ನು ನಡುಗಿಸುವ ಗುಡುಗು

ದಮನವಿದ್ದಲ್ಲೆಲ್ಲ ನನ್ನ ವಿರೋಧ

ನಾನು..

ಜಾಮಿಯಾದಲ್ಲಿ, ಅಲಿಗಡದಲ್ಲಿ

ನಿಮ್ಮ ಲಾಠಿಯನ್ನು ತಡೆದವಳು

ನೀವು ಅಳಿಸಬಯಸುವ

ಇತಿಹಾಸ ನಾನು..

ನೀವು ಒರೆಸಬಯಸುವ

ಭೂಗೋಳ ನಾನು..

ನೋವುಂಡವರೆಲ್ಲರಿಗೂ ನಾನು ಸಹೋದರಿ..

ಕಣ್ಮರೆಯಾದ ಮಕ್ಕಳೆಲ್ಲರ ತಾಯಿ.

ನೀನು ಹಾಸಿಗೆ ಹಿಡಿದಾಗ

ಆರೈಕೆ ಮಾಡಿದ ಹೆಂಡತಿ..

ನಾನು ಸಲಹುವವಳು

ನಾನು ಪ್ರೀತಿಸುವವಳು

ನಾನು ನೆಲದಲ್ಲಿದ್ದೇನೆ

ಬೆಂಕಿಯೊಳಗಿದ್ದೇನೆ

ಮುಗಿಲ ಮೇಲಿದ್ದೇನೆ

ಅಧಿಕಾರಕ್ಕೆ ಧಿಕ್ಕಾರ ಹೇಳುವ

ಪ್ರತಿಕೂಗಿನಲ್ಲೂ ನಾನಿದ್ದೇನೆ

ನಾನು ನರ್ಸ್, ನಾನು ಡಾಕ್ಟರ್

ನಾನು ಹೋರಾಟಗಾರ್ತಿ

ನಾನು ಪತ್ರಕರ್ತೆ...

ನಾನು ಹಲವು,

ನಾನು ಎಲ್ಲವೂ...

ಬುರ್ಖಾ ಧರಿಸಿದ್ದೇನೆ

ಕೆಲವೊಮ್ಮೆ

ಬುರ್ಖಾ ಕಳಚಿದ್ದೇನೆ..

ನಾನು ಮಾತುಕಳೆದುಕೊಂಡವರ ಮಾತು

ನಾನು ಅಯೂಬ್, ನಾನು ಖಾನುಮ್

ನಾನು ಸಿದ್ರಾ, ನಾನು ಅಜೀಮ್

ನಾನು ಇಸ್ಮತ್, ನಾನು ರಾಣಾ

ನಾನು ಸಿಂಘು ಗಡಿಯನ್ನು

ಬೆಳಗಿದ

ಸಾವಿರ ದೀಪಗಳ ಕಂದೀಲು

ನಾನೊಬ್ಬ ಮುಸ್ಲಿಮ್ ಮಹಿಳೆ

ಬೆಳಕನ್ನು ಕಣ್ಣಲ್ಲಿ ಕಾಪಿಟ್ಟುಕೊಂಡು

ಕಾಯುವ ಮಹಿಳೆ..

ಓ ಹೇಡಿಯೇ,

ಓ ಅರಿವುಗೆಟ್ಟ ಗಾವಿಲನೇ.. ತಿಳಿದುಕೋ ...

ನಾನೊಬ್ಬ ಮುಸ್ಲಿಂ ಮಹಿಳೆ

ಹಾಗೂ

ನಾನು ಹರಾಜಿಗಿಲ್ಲ.

- ಮೌಮಿತಾ ಆಲಂ

ಅನು: ಶಿವಸುಂದರ್

(ಬುಲ್ಲಿಬಯ್ಸ, ಸುಲ್ಲಿ ಡೀಲ್ಸ್ ಆ್ಯಪ್‌ಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಅಪಮಾನಿಸುತ್ತಿರುವ ಅನಾಗರಿಕ ಫ್ಯಾಶಿಸ್ಟ್ ಶಕ್ತಿಗಳಿಗೆ ಮುಸ್ಲಿಮ್ ಕವಯಿತ್ರಿಯೊಬ್ಬರ ಉತ್ತರ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)