varthabharthi


ನಿಧನ

ಮುಹಮ್ಮದ್ ಯೂಸುಫ್

ವಾರ್ತಾ ಭಾರತಿ : 14 Jan, 2022

ಮಂಗಳೂರು, ಜ.14: ಪೆರ್ಮುದೆಯ ಮುಹಮ್ಮದ್ ಯೂಸುಫ್(69) ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಜಮೀಯತೇ ಅಹ್ಲೆ ಹದೀಸ್ ದ.ಕ. ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷರೂ, ಮಸ್ಜಿದೇ ಉಸ್ಮಾನಿಯಾ ಮುಹಮ್ಮದೀಯ ಪೆರ್ಮುದೆ ಇದರ ಅಧ್ಯಕ್ಷರೂ ಆಗಿದ್ದ ಮುಹಮ್ಮದ್ ಯೂಸುಫ್ ಹಲವು ವರ್ಷಗಳ ಕಾಲ ಗಲ್ಫ್ ನಲ್ಲಿದ್ದರು. ಕೆಲವು ವರ್ಷದಿಂದ ಊರಲ್ಲೇ ನೆಲೆಸಿದ್ದರು. ಜನಾನುರಾಗಿಯಾಗಿದ್ದ ಯೂಸುಫ್ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಇಂದು ಅಸರ್ ನಮಾಝಿನ ಬಳಿಕ ಮಸ್ಜಿದೇ ಉಸ್ಮಾನಿಯಾ ಪೆರ್ಮುದೆಯಲ್ಲಿ ಜನಾಝ ನಮಾಝ್ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)