varthabharthi


ರಾಷ್ಟ್ರೀಯ

ಮುಂಬೈ: ವಾಟ್ಸ್‌ ಆಪ್‌ ನಲ್ಲೇ ಸರಕಾರಿ ಸೇವೆಗಳ ಮಾಹಿತಿಗಾಗಿ 'ವಾಟ್ಸ್ಆ್ಯಪ್ ಚಾಟ್‌ ಬಾಟ್‌ʼ ಆರಂಭಿಸಿದ ಸರಕಾರ

ವಾರ್ತಾ ಭಾರತಿ : 14 Jan, 2022

ಮುಂಬೈ,ಜ.14: 80ಕ್ಕೂ ಅಧಿಕ ಸೇವೆಗಳಿಗಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ‘ವಾಟ್ಸ್ಆ್ಯಪ್ ಚಾಟ್‌ ಬಾಟ್’ ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಶುಕ್ರವಾರ ವರ್ಚುವಲ್ ಚಾಲನೆ ನೀಡಿದರು.


ಚಾಟ್‌ ಬಾಟ್‌ ನಿಂದ ಜನರು ವಾಟ್ಸ್ಆ್ಯಪ್ ನಂಬರ್ 8999228999 ಮೂಲಕ ತಮ್ಮ ಮೊಬೈಲ್ ಫೋನ್ಗಳಲ್ಲಿ 80ಕ್ಕೂ ಅಧಿಕ ಸೇವೆಗಳು ಮತ್ತು ಸೌಲಭ್ಯಗಳ ಕುರಿತು ಸುಲಭವಾಗಿ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ಬಿಎಂಸಿ ತಿಳಿಸಿದೆ.

ಬಿಎಂಸಿ ವಾಟ್ಸ್ಆ್ಯಪ್ ಬಾಟ್ ಮೂಲಕ ಜನರಿಗೆ 80ಕ್ಕೂ ಅಧಿಕ ಸೇವೆಗಳನ್ನು ಒದಗಿಸುವ ದೇಶದ ಮೊದಲ ಮಹಾನಗರ ಪಾಲಿಕೆಯಾಗಿದೆ ಎಂದು ಹೇಳಿದ ಉದ್ಧವ್ ಠಾಕ್ರೆ,ಈ ಉಪಕ್ರಮವು ವರ್ಕ್-ಫ್ರಮ್-ಹೋಮ್ ಸೌಲಭ್ಯವನ್ನು ಇನ್ನಷ್ಟು ಸಮರ್ಥಗೊಳಿಸಲಿದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)