varthabharthi


ರಾಷ್ಟ್ರೀಯ

ಯತಿ ನರಸಿಂಗಾನಂದನನ್ನು ದ್ವೇಷಭಾಷಣ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಲ್ಲ !: ಪೊಲೀಸರು ಹೇಳಿದ್ದೇನು?

ವಾರ್ತಾ ಭಾರತಿ : 16 Jan, 2022

ಡೆಹ್ರಾಡೂನ್:‌ ಈ ಹಿಂದೆ ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸತ್‌ ನಲ್ಲಿ ಮುಸ್ಲಿಮರ ವಿರುದ್ಧ ನರಮೇಧ ನಡೆಸುವ ಹೇಳಿಕೆಗಳನ್ನು ನೀಡಿದ್ದ ಕಾರ್ಯಕ್ರಮದ ಹಿಂದಿನ ಪ್ರಮುಖ ರೂವಾರಿಯಾಗಿದ್ದ ಯತಿ ನರಸಿಂಗಾನಂದ ಎಂಬಾತನನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ಆದರೆ, ಹರಿದ್ವಾರದಲ್ಲಿನ ದ್ವೇಷಭಾಷಣ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ. 

ಉತ್ತರಾಖಾಂಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿದ್ವಾರ ನಗರದ ಸಿಒ, "ಯತಿ ನರಸಿಂಗಾನಂದನನ್ನು ಬಂಧಿಸಲಾಗಿದೆ. ಆತ ಈ ಹಿಂದೆ ಮಹಿಳೆಯರ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಆತನ ಮೇಲೆ ಇನ್ನೂ ಎರಡು ಮೂರು ಪ್ರಕರಣಗಳಿವೆ" ಎಂದು ಹೇಳಿಕೆ ನೀಡಿದ್ದಾಗಿ ANI  ವರದಿ ಮಾಡಿದೆ. 

ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿ ನರಸಿಂಗಾನಂದನನ್ನು ಬಂಧಿಸಲಾಗಿತ್ತು ಎಂದು ಸಾಮಾಜಿಕ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಹರಡಿತ್ತು. ದ್ವೇಷಭಾಷಣ ಪ್ರಕರಣವನ್ನು ಲಘುವಾಗಿ ಪರಿಗಣಿಸಲಾಗಿದೆ ಎಂದು ಟ್ವಿಟರ್‌ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನನ್ನು ಯುಎಪಿಎ ಪ್ರಕರಣದಲ್ಲಿ ಯಾಕೆ ಬಂಧಿಸಲಾಗಿಲ್ಲ? ನರಮೇಧ ಪ್ರಕರಣ ಯಾಕೆ ದಾಖಲಿಸಲಾಗಿಲ್ಲ? ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು