ದಕ್ಷಿಣ ಕನ್ನಡ
ಯುನಿವೆಫ್ ವಿಶೇಷ ಪುರವಣಿ 'ಸತ್ಯಧಾರೆ' ಬಿಡುಗಡೆ

ಮಂಗಳೂರು, ಜ.16: ಯುನಿವೆಫ್ ಕರ್ನಾಟಕ 2021ರ ನವೆಂಬರ್ 5ರಿಂದ 2022ರ ಜನವರಿ 7ರ ವರೆಗೆ 'ಮಾನವೀಯ ಮೌಲ್ಯಗಳು ಹಾಗೂ ಪರಧರ್ಮ ಸಹಿಷ್ಣುತೆ ಮತ್ತು ಪ್ರವಾದಿ ಮುಹಮ್ಮದ್ (ಸ)' ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿದ್ದ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನ ಸಮಾರೋಪಗೊಂಡ ಹಿನ್ನೆಲೆಯಲ್ಲಿ ಅಭಿಯಾನದ ಆಶಯ, ಉದ್ದೇಶ ಮತ್ತು ಸಾಧನೆಗಳ ಬಗೆಗಿನ ವಿಶೇಷ ಪುರವಣಿ ಬಿಡುಗಡೆ ಕಾರ್ಯಕ್ರಮವು ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
'ಸತ್ಯ ಧಾರೆ' ಹೆಸರಿನ ವಿಶೇಷ ಪುರವಣಿಯನ್ನು ಕೃಷ್ಣಾಪುರದ ಅಬ್ದುಲ್ ಖಾದರ್, ಬಂಟ್ವಾಳದ ಅಶ್ರಫ್ ಫರಂಗಿಪೇಟೆ ಮತ್ತು ಬಜ್ಪೆಯ ಅಬ್ದುಲ್ ರಹ್ಮಾನ್ ಜಂಟಿಯಾಗಿ ಬಿಡುಗಡೆಗೊಳಿಸಿದರು.
ಹಿರಿಯ ಸದಸ್ಯರಾದ ಅಬ್ದುರ್ರಶೀದ್ ಬಂದರ್ ಮತ್ತು ಎಂ.ಪಿ.ಬಶೀರ್ ಫರಂಗಿಪೇಟೆ ಉಪಸ್ಥಿತರಿದ್ದರು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.
ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು. ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಬಾನ್ ನಬೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ