varthabharthi


ದಕ್ಷಿಣ ಕನ್ನಡ

ಮಾಣಿ: ಅನಾರೋಗ್ಯದಿಂದ ಕಬಡ್ಡಿ ಆಟಗಾರ ನಿಧನ

ವಾರ್ತಾ ಭಾರತಿ : 16 Jan, 2022

ಬಂಟ್ವಾಳ, ಜ.16: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್ ಕೆ. (23) ಜ.16ರಂದು ನಿಧನರಾದರು.

ಶಿವಪ್ರಸಾದ್ ಕಬಡ್ಡಿ ಆಟಗಾರನಾಗಿದ್ದು ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು ಎಂದು ತಿಳಿದು ಬಂದಿದೆ.

ಮೃತರು ತಾಯಿ, ಸಹೋದರಿ, ಸಹೋದರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)