varthabharthi


ಕರ್ನಾಟಕ

ಮಂಡ್ಯ: ಸಾವಿನಲ್ಲೂ ಸಾರ್ಥಕತೆ; ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ವಾರ್ತಾ ಭಾರತಿ : 16 Jan, 2022

ಸಾಂದರ್ಭಿಕ ಚಿತ್ರ- (pti photo)

ಮೈಸೂರು,ಜ.16: ಅನಾರೋಗ್ಯಕ್ಕೀಡಾಗಿದ್ದ ನಾಗಮ್ಮ ಎಂಬ ಮಹಿಳೆಯ ಅಂಗಾಂಗ ದಾನ ಮಾಡುವ ಮೂಲಕ ಅವರ ಕುಟುಂಬದವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದರಾದ ನಾಗಮ್ಮ(45) ಎಂಬುವವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಇವರನ್ನು ಜ.13ರಂದು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತಿದ್ದಾರೂ ಅವರ ಸ್ಥಿತಿ ಗಂಭೀರಗೊಂಡಿದ್ದರಿಂದ ಮೈಸೂರಿನ ಅಪೋಲೊ  ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. 

ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಗಮ್ಮ ಅವರ ಆರೋಗ್ಯ ಬಹಳ ಗಂಭೀರಗೊಂಡ ಹಿನ್ನಲೆಯಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಘೋಷಿಸಿದರು. ಇದರಿಂದ ಬೇರೆಯವರಿಗಾದರೂ ಅನುಕೂಲವಾಗಲಿ ಎಂದು ಜ.15 ರಂದು ಅವರು ಪತಿ ಮತ್ತು ಮಕ್ಕಳು ಅಂಗಾಂಗ ದಾನ ಮಾಡುವುದಾಗಿ ತಿಳಿಸಿದರು. 

ಮಾನವ ಅಂಗಾಂಗ ಕಸಿ ಕಾಯ್ದೆ 1994ರ ನಿಯಮದಂತೆ  ವೈದ್ಯರು ಮೆದುಳು, ಯಕೃತ್, ಹೃದಯ ಕವಾಟುಗಳು, ಶಾರ್ನಿಯಾ ಅಂಗಾಂಗಳನ್ನು ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)