ರಾಷ್ಟ್ರೀಯ
ಉತ್ತರಾಖಂಡ: 4.50 ಕೋಟಿ ರೂ.ಮೌಲ್ಯದ ಹಳೆ ಕರೆನ್ಸಿ ನೋಟು ವಶ; 6 ಮಂದಿ ಬಂಧನ
ವಾರ್ತಾ ಭಾರತಿ : 16 Jan, 2022

ಡೆಹ್ರಾಡೂನ್, ಜ.16: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಾಖಂಡದ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಹರಿದ್ವಾರದಲ್ಲಿ ದಾಳಿಗಳನ್ನು ನಡೆಸಿ, ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಅವರಿಂದ 4.50 ಲಕ್ಷಕ್ಕೂ ಅಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದೆ.
‘‘ಹರಿದ್ವಾರದಿಂದ ಮೂವರನ್ನು ಹಾಗೂ ಉತ್ತರಪ್ರದೇಶದಿಂದ ಇತರ ಮೂವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ’’ ಎಂದು ವಿಶೇಷ ಕಾರ್ಯಪಡೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಅಜಯ್ ಸಿಂಗ್ ತಿಳಿಸಿದ್ದಾರೆ.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ ಹಾಗೂ ಮಾರ್ಚ್ 10ರಂದು ಮತ ಎಣಿಕೆಯಾಗಲಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)