ಅಂತಾರಾಷ್ಟ್ರೀಯ
ಟೆಕ್ಸಾಸ್ ಒತ್ತೆಸೆರೆ ಪ್ರಕರಣ: ಅಮೆರಿಕ ಜೈಲಿನಲ್ಲಿದ್ದ ಪಾಕ್ ಕೈದಿಯ ಬಿಡುಗಡೆಗೆ ಆಗ್ರಹಿಸಿದ್ದ ದುಷ್ಕರ್ಮಿ
ನ್ಯೂಯಾರ್ಕ್, ಜ.16: ಟೆಕ್ಸಾಸ್ನಲ್ಲಿ ಶನಿವಾರ ಹಲವರನ್ನು ಒತ್ತೆಸೆರೆಯಲ್ಲಿರಿಸಿದ್ದ ವ್ಯಕ್ತಿಯು ಅಮೆರಿಕದ ಯೋಧರ ಕೊಲೆಯತ್ನದ ಅಪರಾಧಕ್ಕೆ 86 ವರ್ಷದ ಜೈಲುಶಿಕ್ಷೆಗೆ ಗುರಿಯಾಗಿದ್ದ ಪಾಕ್ ಪ್ರಜೆ ಆಫಿಯಾ ಸಿದ್ದಿಕಿಯ ಬಿಡುಗಡೆಯ ಷರತ್ತು ಮುಂದಿರಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ಟೆಕ್ಸಾಸ್ನಲ್ಲಿ 4 ಮಂದಿಯನ್ನು 10 ಗಂಟೆಗಳ ಕಾಲ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ವರ್ಷದ ದುಷ್ಕರ್ಮಿಯನ್ನು ಬಳಿಕ ಹತ್ಯೆ ಮಾಡಲಾಗಿದ್ದು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ದುಷ್ಕರ್ಮಿ 49 ವರ್ಷದ ಆಫಿಯಾ ಸಿದ್ದಿಕಿಯ ಬಿಡುಗಡೆಯ ಬೇಡಿಕೆ ಮುಂದಿರಿಸಿದ್ದ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಪ್ರಕರಣದಲ್ಲಿ ಸಫಿಯಾ ಅವರ ಯಾವುದೇ ಪಾತ್ರವಿಲ್ಲ ಎಂದು ಅವರ ವಕೀಲರು ಹೇಳಿದ್ದು, ಒತ್ತೆಸೆರೆ ಪ್ರಕರಣವನ್ನು ಖಂಡಿಸಿದ್ದಾರೆ.
ಅಮೆರಿಕದ ಪ್ರತಿಷ್ಟಿತ ಬಾಸ್ಟನ್ ಎಂಐಟಿಯಲ್ಲಿ ಅಧ್ಯಯನ ನಡೆಸಿದ್ದ ಆಫಿಯಾ, ಬ್ರಾಂಡೀಸ್ರ ವಿವಿಯಲ್ಲಿ ಪಿಎಚ್ಡಿ ಪದವಿ ಪಡೆದಿದ್ದಳು.
ಇಸ್ಲಾಮಿಕ್ ಸಂಘಟನೆಗಳಿಗೆ ದೇಣಿಗೆ ನೀಡುತ್ತಿದ್ದ ಆಫಿಯಾ , 10,000 ಡಾಲರ್ ಮೊತ್ತದ ರಾತ್ರಿ ದೃಷ್ಟಿಯ ಕನ್ನಡಕಗಳು, ಯುದ್ಧದ ಕುರಿತಾದ ಪುಸ್ತಕಗಳನ್ನು ಖರೀದಿಸಿದ್ದು 2001ರ ನವೆಂಬರ್ನಲ್ಲಿ ಅಮೆರಿಕದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣದ ಬಳಿಕ ಆಕೆಯ ಮೇಲೆ ಅಮೆರಿಕದ ಅಧಿಕಾರಿಗಳು ನಿಗಾ ವಹಿಸಿದ್ದರು. ಪಾಕಿಸ್ತಾನಕ್ಕೆ ಮರಳಿದ ಆಫಿಯಾ, 2001ರ ಬಾಂಬ್ ದಾಳಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ಖಾಲಿದ್ ಶೇಕ್ ಮುಹಮ್ಮದ್ ಕುಟುಂಬದ ವ್ಯಕ್ತಿಯನ್ನು ವಿವಾಹವಾಗಿದ್ದಳು. 2010ರಲ್ಲಿ ಅಫ್ಗಾನಿಸ್ತಾನದಲ್ಲಿ ಅಮೆರಿಕದ ಯೋಧರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಆಕೆಯನ್ನು ಜೈಲಿಗೆ ಹಾಕಲಾಗಿತ್ತು. ಅಲ್ಖೈದಾದೊಂದಿಗೆ ಸಂಪರ್ಕದ ಬಗ್ಗೆ ಅಮೆರಿಕದ ಶಂಕೆಗೆ ಒಳಗಾದ ಪ್ರಥಮ ಮಹಿಳೆ ಇವರಾಗಿದ್ದರೂ ಈ ಅಪರಾಧ ಸಾಬೀತಾಗಿಲ್ಲ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಟಾಪ್ ಸುದ್ದಿಗಳು
ಬೆಂಗಳೂರು
