ಮಂಗಳೂರು ತಾಪಂ ಮಾಜಿ ಸದಸ್ಯ ಎಂ.ಕೆ. ಮುಹಮ್ಮದ್ ಕುತ್ತಾರ್ ನಿಧನ
ಮಂಗಳೂರು, ಜ.17: ತೊಕ್ಕೊಟ್ಟು ಸಮೀಪದ ಕುತ್ತಾರ್ ನಿವಾಸಿ, ಮಂಗಳೂರು ತಾಪಂ ಮಾಜಿ ಸದಸ್ಯ ಹಾಜಿ ಎಂಕೆ ಮುಹಮ್ಮದ್ (78) ಸೋಮವಾರ ರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಂಬ್ಲಮೊಗರು ಗ್ರಾಮದ ಕುಂಡೂರು ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರು ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರಾಗಿದ್ದರು. ಮುನ್ನೂರು ಗ್ರಾಪಂ ಸದಸ್ಯರಾಗಿ ಎರಡು ಬಾರಿ ಚುನಾಯಿತರಾಗಿದ್ದರು.
Next Story