ರಾಷ್ಟ್ರೀಯ
ಕೋರ್ಟ್ ವರ್ಚುವಲ್ ಕಲಾಪದ ವೇಳೆ ಹಲ್ಲುಜ್ಜುತ್ತಾ ಕಾಣಿಸಿಕೊಂಡ ವ್ಯಕ್ತಿ!

Screengrab - Mathrubhumi News
ತಿರುವನಂತಪುರಂ: ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಸೋಮವಾರದಿಂದ ಕೇರಳ ಹೈಕೋರ್ಟ್ ತನ್ನ ಕಲಾಪಗಳನ್ನು ವರ್ಚುವಲ್ ಆಗಿ ನಡೆಸಲು ಆರಂಭಿಸಿದೆ. ಆದರೆ ಕಲಾಪದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬ ವೈಯಕ್ತಿಕ ಚಟುವಟಿಕೆಯನ್ನು ನಡೆಸುತ್ತಿರುವುದು ಮೊದಲ ದಿನವೇ ಗೋಚರವಾಗಿದೆ. ಜಸ್ಟಿಸ್ ವಿ ಜಿ ಅರುಣ್ ಅವರ ನೇತೃತ್ವ ಪೀಠ ವಿಚಾರಣೆ ನಡೆಸುತ್ತಿರುವ ಸಂದರ್ಭ ಒಬ್ಬ ವ್ಯಕ್ಕಿ ಹಲ್ಲುಜ್ಜುತ್ತಿರುವ ಹಾಗೂ ಶೇವ್ ಮಾಡುತ್ತಿರುವುದೂ ಕಾಣಿಸಿದೆ. ಈ ವ್ಯಕ್ತಿ ಕ್ಯಾಮರಾಗೆ ಮುಖ ಮಾಡಿಕೊಂಡೇ ವಾಶ್ ರೂಂನಲ್ಲಿ ಹಲ್ಲುಜ್ಜುತ್ತಿರುವುದು ಕಾಣಿಸಿದೆ.
ಕಳೆದ ವರ್ಷ ಕೂಡ ವರ್ಚುವಲ್ ವಿಚಾರಣೆ ಸಂದರ್ಭ ನವೆಂಬರಿನಲ್ಲಿ ಒಬ್ಬ ವ್ಯಕ್ತಿ ಜಸ್ಟಿಸ್ ದೇವನ್ ರಾಮಚಂದ್ರನ್ ಅವರ ಪೀಠ ವಿಚಾರಣೆ ನಡೆಸುತ್ತಿರುವ ಸಂದರ್ಭ ಶರ್ಟ್ ಇಲ್ಲದೆಯೇ ಕಾಣಿಸಿಕೊಂಡಿದ್ದ. ಇದಕ್ಕೆ ಜಸ್ಟಿಸ್ ರಾಮಚಂದ್ರನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ``ಇದು ಕೋರ್ಟ್ ಕಲಾಪ, ಸರ್ಕಸ್ ಅಥವಾ ಸಿನೆಮಾ ಅಲ್ಲ,'' ಎಂದು ಹೇಳಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ