varthabharthi


ಉಡುಪಿ

ಜ.24ರಂದು ಈಜುಪಟು ಗಂಗಾಧರ್ ಕಡೆಕಾರ್‌ರಿಂದ ಮತ್ತೊಂದು ವಿಶ್ವದಾಖಲೆ ಯತ್ನ

ವಾರ್ತಾ ಭಾರತಿ : 19 Jan, 2022

ಉಡುಪಿ, ಜ.19: ಕಡೆಕಾರು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ದಾಖಲೆ ಈಜುಪಟು ಗಂಗಾಧರ ಜಿ.ಕಡೆಕಾರ್ ಮತ್ತೊಂದು ವಿಶ್ವದಾಖಲೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇವರು ತನ್ನ ಕೈ ಮತ್ತು ಕಾಲುಗಳಿಗೆ ಕೋಳ ತೊಡಿಸಿ ಸಮುದ್ರದಲ್ಲಿ 3.5ಕಿ.ಮೀ. ದೂರ ಈಜಿ ವಿಶ್ವ ದಾಖಲೆ ನಿರ್ಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಗಂಗಾಧರ ಜಿ.ಕಡೆಕಾರ್ ಈ ಕುರಿತು ಮಾಹಿತಿ ನೀಡಿದರು. ಜ.24ರಂದು ಬೆಳಗ್ಗೆ 7ಗಂಟೆಗೆ ಕಿದಿಯೂರು ಪಡುಕೆರೆ ಶ್ರೀ ದೇವಿ ಭಜನಾ ಮಂದಿರದ ಬಳಿಯ ಕಡಲ ತೀರದಿಂದ ಕೈ ಮತ್ತು ಕಾಲುಗಳಿಗೆ ಕೋಳ ತೊಟ್ಟು ಈಜಲಿದ್ದು, ಸುಮಾರು 1750 ಮೀಟರ್ ದೂರ ಈಜಿ ಮತ್ತೆ 1750ಮೀಟರ್ ವಾಪಾಸ್ಸು ಬರುವ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ವಿಶ್ವ ದಾಖಲೆ ಯಾಗಿದೆ. ಈ ದಾಖಲೆಗೆ ತೀರ್ಪುಗಾರರಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಮನೀಷ್ ವೈಷ್ಣಾಯ್ ಭಾಗವಹಿಸಲಿರುವರು. ಕಾರ್ಯಕ್ರಮಕ್ಕೆ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಮೊದಲಾದವರು ಭಾಗ ವಹಿಸಲಿರುವರು ಎಂದು ಅವರು ತಿಳಿಸಿದರು.

ಗಂಗಾಧರ ಜಿ.ಕಡೆಕಾರು ಕಳೆದ ವರ್ಷ ಕಿದಿಯೂರು ಪಡೆಕೆರೆಯ ಸಮುದ್ರ ದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಹಾಕಿ 1.4. ಕಿ.ಮೀಟರ್ ದೂರ ಬ್ರೆಸ್ಟ್ ಸ್ಟೋಕ್ ಶೈಲಿಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಿಜಯ ಕುಂದರ್, ಮಾಜಿ ಸದಸ್ಯ ಪಾಡುರಂಗ ಮಲ್ಪೆ, ಕ್ಲಬ್‌ನ ಉಪಾಧ್ಯಕ್ಷರಾದ ಚಂದ್ರ ಎ.ಕುಂದರ್, ಹರ್ಷ ಮೈಂದನ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)