varthabharthi


ಕರ್ನಾಟಕ

ಅಧಿಕಾರಿಗಳಿಗೆ ಸಂಬಳ ಬರುತ್ತಿರುವುದು ಸರಕಾರದಿಂದಲೋ, ಬಿಜೆಪಿ ಕಚೇರಿಯಿಂದಲೋ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ವಾರ್ತಾ ಭಾರತಿ : 20 Jan, 2022

ಬೆಂಗಳೂರು, ಜ. 20: `ಸರಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಚಿಹ್ನೆಯ ಬದಲು ಬಿಜೆಪಿ ಚಿಹ್ನೆ! ಬಿಜೆಪಿ ಅಧ್ಯಕ್ಷರುಗಳ ಫೋಟೋ! ಸರಕಾರದ ಶಿಷ್ಟಾಚಾರಗಳನ್ನು ಬದಿಗೊತ್ತಿ ಬಿಜೆಪಿಯ ಬ್ಯಾನರ್ ಹಾಕಲು ಅಧಿಕಾರಿಗಳಿಗೆ ಯಾರು ಹೇಳಿದ್ದು?' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಗುರುವಾರ ಟ್ವೀಟ್ ಮಾಡಿರುವ ಅವರು, `ಸರಕಾರಿ ಅಧಿಕಾರಿಗಳಿಗೆ ಸಂಬಳ ಬರುತ್ತಿರುವುದು ಸರಕಾರದಿಂದಲೋ? ಅಥವಾ ಬಿಜೆಪಿ ಕಚೇರಿಯಿಂದಲೋ?' ಎಂದು ಪ್ರಶ್ನಿಸಿದ್ದು, ಸರಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದ ವಿಡಿಯೋ ಶೇರ್ ಮಾಡಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)