varthabharthi


ರಾಷ್ಟ್ರೀಯ

ಮಿಝೋರಾಂನಲ್ಲಿ 5.6 ತೀವ್ರತೆಯ ಭೂಕಂಪನ, ಈಶಾನ್ಯ ರಾಜ್ಯಗಳಲ್ಲಿ ಕಂಪನದ ಅನುಭವ

ವಾರ್ತಾ ಭಾರತಿ : 21 Jan, 2022

ಚಂಫೈ(ಮಿಝೋರಾಂ): ಮಿಝೋರಾಂನ ಚಂಫೈ ಬಳಿ ಇಂದು ಮಧ್ಯಾಹ್ನ 5.6 ತೀವ್ರತೆಯ ಭೂಕಂಪನ ವರದಿಯಾಗಿದ್ದು, ಮಿಝೋರಾಂ, ಮಣಿಪುರ, ಅಸ್ಸಾಂ ಹಾಗೂ  ಉತ್ತರ ಬಂಗಾಳದಲ್ಲಿ ಕಂಪನದ ಅನುಭವವಾಗಿದೆ.

 ಭೂಕಂಪವು ಮಧ್ಯಾಹ್ನ 3:42 ಕ್ಕೆ ಮೇಲ್ಮೈಯಿಂದ 60 ಕಿ.ಮೀ. ಆಳದಲ್ಲಿ ಸಂಭವಿಸಿದೆ.

ಭೂಕಂಪದ ಕೇಂದ್ರಬಿಂದು ಇಂಡೋ-ಮ್ಯಾನ್ಮಾರ್ ಗಡಿ ಪ್ರದೇಶದ ಚಂಫೈನಿಂದ 58 ಕಿ.ಮೀ. ಆಗ್ನೇಯದಲ್ಲಿದೆ.

ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ವರದಿಯಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)