varthabharthi


ಬೆಂಗಳೂರು

ನಾನ್ ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಲು ಒತ್ತಾಯ

ವಾರ್ತಾ ಭಾರತಿ : 25 Jan, 2022

ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.25: ಮೀಸಲಿರುವ ಹುದ್ದೆಗಳಲ್ಲಿ ಐಪಿಎಸ್‍ಯೇತರ ಅಧಿಕಾರಿಗಳನ್ನೆ ನಿಯೋಜಿಸಿ ಮುಂಭಡ್ತಿ ನೀಡಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜ್ಯ ಪೊಲೀಸ್ ಮಹಾಸಂಘವು ಪತ್ರ ಬರೆದಿದೆ.

ಮುಂಭಡ್ತಿ ವಿಚಾರದಲ್ಲಿ ಐಪಿಎಸ್ ಹಾಗೂ ನಾನ್ ಐಪಿಎಸ್ ಅಧಿಕಾರಿಗಳ ನಡುವೆ ತಾರತಮ್ಯ ಮಾಡಲಾಗತ್ತಿದೆ. ಅಲ್ಲದೆ, ರಾಜ್ಯದಲ್ಲಿ 109 ನಾನ್ ಐಪಿಎಸ್ ಹುದ್ದೆಗಳು ಮಂಜೂರಾಗಿವೆ. ಈ ಹುದ್ದೆಗಳಲ್ಲಿ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದ್ದು, ಈ ರೀತಿ ನೇಮಕಾತಿ ಮಾಡುವುದರಿಂದ ಐಪಿಎಸ್‍ಯೇತರ ಅಧಿಕಾರಿಗಳ ಭಡ್ತಿ ವಿಳಂಬವಾಗುತ್ತಿದೆ. 

ಇದರಿಂದ ಸ್ಥಳೀಯ ಕನ್ನಡಿಗ ನಾನ್ ಐಪಿಎಸ್ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಸರಕಾರ ಐಪಿಎಸ್ ಅಧಿಕಾರಿಗಳಿಗಾಗಿಯೇ 57 ಪ್ರತ್ಯೇಕ ಹುದ್ದೆ ಮೀಸಲು ಮಾಡಲಾಗಿದೆ. ಆದರೆ, ನಾನ್ ಐಪಿಎಸ್ ಹುದ್ದೆಗಳನ್ನು ಐಪಿಎಸ್ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನ್ ಐಪಿಎಸ್ ಪೋಸ್ಟಿಂಗ್‍ಗಳನ್ನು ನಾನ್ ಐಪಿಎಸ್ ಅಧಿಕಾರಿಗಳಿಗೆ ನೀಡುವಂತೆ ಸಂಘದ ಅಧ್ಯಕ್ಷ ಯೋಗೇಶ್ ಮನವಿ ಮಾಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)