varthabharthi


ಬೆಂಗಳೂರು

ಲಸಿಕೆ ಪಡೆಯದ ಮೃತ ವ್ಯಕ್ತಿಗೆ ಲಸಿಕೆ ಪ್ರಮಾಣ ಪತ್ರ ನೀಡಿದ ಬಿಬಿಎಂಪಿ!

ವಾರ್ತಾ ಭಾರತಿ : 25 Jan, 2022

 ಬಿಬಿಎಂಪಿ ಕೇಂದ್ರ ಕಚೇರಿ 

ಬೆಂಗಳೂರು, ಜ.25: ಲಸಿಕೆಯನ್ನು ಪಡೆಯದ ವ್ಯಕ್ತಿಗಳಿಗೆ ಲಸಿಕೆ ನೀಡಲಾಗಿದೆ ಎಂದು ದೂರವಾಣಿ ಸಂದೇಶಗಳು ಬರುತ್ತಿದ್ದು, ಕಳೆದ ಎಂಟು ತಿಂಗಳ ಹಿಂದೆ ಮರಣ ಹೊಂದಿದವರಿಗೂ ಎರಡನೆ ಡೋಸ್ ಲಸಿಕೆ ನೀಡಲಾಗಿದೆ ಎಂದು  ಲಸಿಕಾ ಪ್ರಮಾಣ ಪತ್ರ ನೀಡಿ ಬಿಬಿಎಂಪಿ ಎಡವಟ್ಟು ಮಾಡಿಕೊಂಡಿದೆ.  

ನಗರದ ಉತ್ತರಹಳ್ಳಿ ನಿವಾಸಿ ರಾಘವೇಂದ್ರ ಕಳೆದ ಎಂಟು ತಿಂಗಳ ಹಿಂದೆ ಮೃತರಾಗಿದ್ದರು. ಆದರೆ ಸೋಮವಾರದಂದು ಎರಡನೆಯ ಡೋಸ್ ಲಸಿಕೆಯನ್ನು ಪಡೆದುಕೊಂಡಿರುವ ಕುರಿತು ದೂರವಾಣಿ ಸಂದೇಶದೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗಿದೆ.

ನಿನ್ನೆ ಏಕಾಏಕಿ ರಾಘವೇಂದ್ರ ಬಳಕೆ ಮಾಡುತ್ತಿದ್ದ ಮೊಬೈಲ್‌ಗೆ ಸಂದೇಶ ಬಂದಿದ್ದು, ನೀವೂ ಎರಡನೇ ಡೋಸ್ ಪಡೆದಿದ್ದೀರಿ ಎಂದು ತಿಳಿಸಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.

ಇದೀಗ ಬಿಬಿಎಂಪಿ ಕಾರ್ಯ ವೈಖರಿಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. 
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)