ಕ್ರೀಡೆ
ಸ್ಪಾಟ್ ಫಿಕ್ಸಿಂಗ್ ಕುರಿತು ಮಾಹಿತಿ ನೀಡದ ಆರೋಪ
ಝಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ ಹೇರಿದ ಐಸಿಸಿ

Photo: twitter
ದುಬೈ, ಜ.28: ಭಾರತದ ಬುಕ್ಕಿಯೊಬ್ಬ ತನ್ನನ್ನು ಸಂಪರ್ಕಿಸಿ ಹಣ ನೀಡಿರುವ ವಿಚಾರವನ್ನು ತಕ್ಷಣವೇ ಐಸಿಸಿಗೆ ತಿಳಿಸಲು ವಿಫಲನಾಗಿದ್ದೇನೆ ಎಂದು ಝಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್ ಟೇಲರ್ ಹೇಳಿಕೆಯೊಂದರಲ್ಲಿ ಒಪ್ಪಿಕೊಂಡ ಕೆಲವೇ ದಿನಗಳ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬ್ರೆಂಡನ್ ಟೇಲರ್‌ಗೆ ಮೂರೂವರೆ ವರ್ಷಗಳ ಕಾಲ ನಿಷೇಧ ಹೇರಿದೆ.
ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆ ಹಾಗೂ ಡೋಪಿಂಗ್ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿರುವ ಬ್ರೆಂಡನ್ ಟೇಲರ್‌ಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಮೂರೂವರೆ ವರ್ಷಗಳ ಕಾಲ ನಿಷೇಧ ಹೇರಲಾಗಿದೆ ಎಂದು ಐಸಿಸಿ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಭಾರತದಲ್ಲಿ ಬುಕ್ಕಿಯ ಭೇಟಿಯ ವೇಳೆ ತಾನು ಕೊಕೇನ್ ಸೇವಿಸಿದ ಬಳಿಕ ಅದನ್ನು ವೀಡಿಯೊ ಮಾಡಿ ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂದು ಒಪ್ಪಿಕೊಂಡಿರುವ ಟೇಲರ್ ಝಿಂಬಾಬ್ವೆ ಪರ 2004 ಹಾಗೂ 2021ರ ನಡುವೆ 284 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 17 ಶತಕಗಳ ಸಹಿತ ಒಟ್ಟು 9,938 ರನ್ ಕಲೆ ಹಾಕಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ