ಮಂಗಳೂರು: ಫೋರಂ ಮಾಲ್ನಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಘಟಕ
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫೋರಂ ಮಾಲ್ನಲ್ಲಿ ಆರಂಭಿಸಲಾದ ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಘಟಕವನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಚಾಲನೆ ನೀಡಿದರು.
’ಸ್ಟಾಟಿಕ್’ ಕಂಪನಿಯ ಈ ಘಟಕವು ಮಂಗಳೂರಿನ ಮಾಲ್ಗಳಲ್ಲೇ ಪ್ರಪ್ರಥಮ ಹಾಗೂ ಏಕೈಕ ಚಾರ್ಜಿಂಗ್ ವ್ಯವಸ್ಥೆಯಾಗಿದೆ.
2 ಚಾರ್ಜಿಂಗ್ ಘಟಕಗಳಿದ್ದು, ಎಲ್ಲಾ ಬಗೆಯ ಇಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದಾಗಿದೆ. ಈ ಸ್ಪೀಡ್ ಚಾರ್ಜಿಂಗ್ ವ್ಯವಸ್ಥೆಯಲ್ಲಿ ಬ್ಯಾಟರಿಗಳಿಗೆ ಅನುಗುಣವಾಗಿ 2-4 ಗಂಟೆಯೊಳಗೆ ಚಾರ್ಜ್ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.
Next Story