varthabharthi


ನಿಧನ

ತೌಸೀಫ್ ಮಲಾರ್

ವಾರ್ತಾ ಭಾರತಿ : 14 Mar, 2022

ಮಂಗಳೂರು : ಪಾವೂರು ಗ್ರಾಮದ ಮಲಾರ್ ಅರಸ್ತಾನ ನಿವಾಸಿ ತೌಸೀಫ್ ಮಲಾರ್ (30) ಸೋಮವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂರು ತಿಂಗಳ ಗಂಡು ಮಗು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ತೌಸೀಫ್ ಮಲಾರ್ ಜಂಕ್ಷನ್‌ನಲ್ಲಿ ರವಿವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೆ ಸೋಮವಾರ ಮುಂಜಾನೆಯ ವೇಳೆಗೆ ನಿಧನರಾದರು.

ಮಲಾರ್ ಅರಸ್ತಾನದ ಅಲ್‌ಮುಬಾರಕ್ ಜುಮಾ ಮಸೀದಿ ಬಳಿ ದಫನ ಮಾಡಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)