ಏಕಕಾಲದಲ್ಲಿ ʼKGF-2ʼ, ವಿಜಯ್ ಅಭಿನಯದ ʼಬೀಸ್ಟ್ʼ: ಈ ಬಗ್ಗೆ ನಟ ಯಶ್ ಹೇಳಿದ್ದೇನು ಗೊತ್ತೇ?
ಕೆಜಿಎಫ್ -2 ಚಿತ್ರದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ
ಕೆಜಿಎಫ್ -2 ಚಿತ್ರದ ಪೋಸ್ಟರ್
ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್ -2 ಚಿತ್ರದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಹೊರ ಬಂದಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ -2 ಚಿತ್ರ ಎಪ್ರಿಲ್ 14ಕ್ಕೆ ಬಿಡುಗಡೆಯಾಗಲಿದ್ದು, ರವಿವಾರ ಬಿಡುಗಡೆಗೊಂಡ ಟ್ರೈಲರ್ ಇದೀಗ ಐದೂ ಭಾಷೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪೆಡೆದಿದೆ.
ಕೆಜಿಎಫ್ -1 ಚಿತ್ರದಲ್ಲಿ ಪತ್ರಕರ್ತನಾಗಿ ಅನಂತ್ ಅವರು ನಾಗ್ ಇದ್ದರೆ ಕೆಜಿಎಫ್ -2 ಚಿತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ.
‘ನಾವು ತುಂಬ ಮುಂಚೆಯೇ ಸಿನೆಮಾ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿದ್ದೇವೆ. ಯಾವ ಸಿನೆಮಾ ಅದೇ ದಿನಾಂಕಕ್ಕೆ ಬಿಡುಗಡೆಯಾಗಲಿದೆ ಎಂಬ ಬಗ್ಗೆ ತಿಳಿದಿರಲಿಲ್ಲ. ಈಗ ವಿಜಯ್ ಅವರ ಬೀಸ್ಟ್ ಚಿತ್ರ ಬರುತ್ತಿದ್ದು, ಬೀಸ್ಟ್ ವರ್ಸಸ್ ಕೆಜಿಎಫ್ ಅಂತ ಹೇಳಬಾರದು. ಬೀಸ್ಟ್ ಮತ್ತು ಕೆಜಿಎಫ್ ಎಂದು ಹೇಳಬೇಕು. ಎರಡೂ ಕೂಡ ಇಂಡಿಯನ್ ಸಿನೆಮಾ. ಇದು ಚುನಾವಣೆ ಅಲ್ಲ, ಸಿನೆಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನೆಮಾವನ್ನೂ ನೋಡೋಣ. ವಿಜಯ್ ಸರ್ ನನಗಿಂತ ಹಿರಿಯರು. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್ ಅವರ ಅಭಿಮಾನಿಗಳಿಗೂ ‘ಕೆಜಿಎಫ್ 2’ ಸಿನೆಮಾ ಇಷ್ಟ ಆಗಲಿದೆ’ ಎಂದು ನಟ ಯಶ್ ರವಿವಾರ ಈ ಕುರಿತು ಟ್ರೈಲರ್ ಬಿಡುಗಡೆ ಬಳಿಕ ಪ್ರತಿಕ್ರಿಯಿಸಿದ್ದಾರೆ.