varthabharthi


ನಿಧನ

ಎಂ.ಎ. ಅಬೂಬಕರ್ ಹಾಜಿ‌

ವಾರ್ತಾ ಭಾರತಿ : 15 Apr, 2022

ಕಾಸರಗೋಡು : ಕೇರಳದ ಹಿರಿಯ ಗುತ್ತಿಗೆದಾರ, ಕಾಸರಗೋಡು ಚೆಂಗಳ ಮುನಂಬ ಮನೆತನದ ಎಂ.ಎ. ಅಬೂಬಕ್ಕರ್ ಹಾಜಿ (78) ಶುಕ್ರವಾರ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ದ.ಕ. ಜಿಲ್ಲೆಯ ಸುಳ್ಯ ಹಾಗೂ ಅಸುಪಾಸಿನಲ್ಲಿ ಮತ್ತು ಕೇರಳದ ಅನೇಕ ಮಸೀದಿ, ಮದ್ರಸ, ಶಾಲೆಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರು. ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಕೊಡುಗೈ ದಾನಿಯಾಗಿಯೂ ಗುರುತಿಸಲ್ಪಟ್ಟಿದ್ದರು.

ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ ಶಹೀದ್ ಸಂತಾಪ ಸೂಚಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)