varthabharthi


ಸಿನಿಮಾ

ವಿಶ್ವದಾದ್ಯಂತ 1,000 ಕೋಟಿ ರೂ. ಗಳಿಕೆಯ ಗಡಿ ದಾಟಿದ ಕೆಜಿಎಫ್-‌2 ಚಿತ್ರ

ವಾರ್ತಾ ಭಾರತಿ : 1 May, 2022

Photo: Twitter/sidkannan

ಹೊಸದಿಲ್ಲಿ: ಯಶ್‌ ನಾಯಕ ನಟನಾಗಿರುವ ಕನ್ನಡದ ಕೆಜಿಎಫ್-‌2 ಸಿನಿಮಾವು ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದು, ವಿಶ್ವದಾದ್ಯಂತ ಒಟ್ಟು ಗಳಿಕೆಯಲ್ಲಿ 1000ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ ಎಂದು indiatoday.com ವರದಿ ಮಾಡಿದೆ. ಆರ್‌ಆರ್‌ಆರ್‌, ದಂಗಲ್‌ ಹಾಗೂ ಬಾಹುಬಲಿ ದಿ ಕಂಕ್ಲೂಷನ್‌ ಸಿನಿಮಾಗಳ ಬಳಿಕ ಈ ಸಾಧನೆ ಮಾಡಿದ ನಾಲ್ಕನೆ ಸಿನಿಮಾ ಕೆಜಿಎಫ್-‌2 ಆಗಿದೆ. 

ಎಪ್ರಿಲ್‌ 14ರಂದು ಬಿಡುಗಡೆಯಾಗಿದ್ದ ಕೆಜಿಎಫ್-‌2 ಸಿನಿಮಾ ಪ್ರಾರಂಭದಿಂದಲೇ ಹಲವು ದಾಖಲೆಗಳನ್ನು ಮುರಿದಿತ್ತು. ಮೊದಲ ದಿನವೇ 134.50 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಂದಿನಿಂದ ಪ್ರಾರಂಭವಾದ ಕೆಜಿಎಫ್‌ ಯಶೋಗಾಥೆ ಇದೀಗ 1000ಕೋಟಿ ರೂ. ಗಳಿಕೆಗೆ ತಲುಪಿದೆ. ಈ ಬಗ್ಗೆ ಟ್ವೀಟ್‌ ಮಾಡಿದ ಫಿಲ್ಮ್‌ ಟ್ರೇಡ್‌ ಅನಾಲಿಸ್ಟ್‌ ರಮೇಶ್‌ ಬಾಲ "ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ ನಲ್ಲಿ ಕೆಜಿಎಫ್-‌2 1000ಕೋಟಿ ರೂ. ಗಳಿಕೆಯನ್ನು ದಾಟಿದೆ.  ದಂಗಲ್‌, ಬಾಹುಬಲಿ 2 ಮತ್ತು ಆರ್‌ಆರ್‌ಆರ್‌ ನಂತರ ಈ ಸಾಧನೆ ಮಾಡಿದ ನಾಲ್ಕನೇ ಸಿನಿಮಾ ಇದಾಗಿದೆ" ಎಂದಿದ್ದಾರೆ.

ಯಶ್‌, ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ. 


‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು