varthabharthi


ಕರ್ನಾಟಕ

ಮೈಸೂರಿನಲ್ಲಿ 'ಸಿದ್ದರಾಮಯ್ಯ ಅಭಿಮಾನಿಗಳ ಬ್ರಿಗೇಡ್‍'ಗೆ ಚಾಲನೆ

ವಾರ್ತಾ ಭಾರತಿ : 13 May, 2022

ಸಿದ್ದರಾಮಯ್ಯ

ಮೈಸೂರು,ಮೇ.13: ಅಖಿಲ ಕರ್ನಾಟಕ ಸಿದ್ದರಾಮಯ್ಯನವರ ಅಭಿಮಾನಿಗಳ ಬ್ರಿಗೇಡ್ ಸಂಘಟನೆಗೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇಂದು ಚಾಲನೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ  ಸಂಘಟನೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು,  ಕರ್ನಾಟಕ ರಾಜ್ಯದಲ್ಲಿ ರಾಜಕಾರಣಿಗಳು ಬಹಳಷ್ಟು ಜನ ಆಡಳಿತವನ್ನು ಕೊಟ್ಟು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ದೇವರಾಜ ಅರಸು ಅವರು ಈ ರಾಜ್ಯದ ಅತ್ಯಂತ ಹೆಚ್ಚಿನ ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಂತಹ ಓರ್ವ ಧೀಮಂತ ನಾಯಕರು. ಅವರು ನಮ್ಮ ಜಿಲ್ಲೆಯವರು ಮತ್ತೊಬ್ಬರು ಐದು ವರ್ಷ ಪೂರೈಸಿದವರು ಸಿದ್ದರಾಮಯ್ಯನವರೇ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯವರು ಎಂಬುದೇ ನಮಗೆ ಹೆಮ್ಮೆ ಎಂದರು. 

ದೇವರಾಜ ಅರಸು ಬಳಿಕ ಅತ್ಯುತ್ತಮ ಮುಖ್ಯಮಂತ್ರಿಗಳು ಎಂದರೆ ಅದು ಸಿದ್ದರಾಮಯ್ಯನವರು. ಐದು ವರ್ಷ ಅಧಿಕಾರವನ್ನು ಪೂರೈಸಿ ಉತ್ತಮ ಆಡಳಿತವನ್ನು ನೀಡಿದರು. ನಲ್ವತ್ತನಾಲ್ಕು ವರ್ಷಗಳು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಆಡಳಿತ ಪಕ್ಷದ ವೈಫಲ್ಯವನ್ನು ಎಳೆಎಳೆಯಾಗಿ ಸದನದಲ್ಲಿ ಹೇಳಿ, ಹೊರಗಡೆ ಪ್ರತಿಭಟನೆ ಮಾಡಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿರುವುದು ಇತಿಹಾಸದ ಪುಟದಲ್ಲಿ ಬರೆದಿಡುವಂಥದ್ದು ಎಂದರು.  ಬಳ್ಳಾರಿಯಾತ್ರೆಯಿಂದ ಗಣಿಲೂಟಿಮಾಡಿದವರನ್ನು ಜೈಲಿಗೆ ಹಾಕಿಸಿದವರು. ವಿರೋಧ ಪಕ್ಷದ ನಾಯಕನಾಗಿದ್ದಾಗಿಯೂ ಸಮರ್ಪಕವಾಗಿ ಆ ಒಂದು ಸಂದರ್ಭವನ್ನು ಬಳಸಿ ಕೆಲಸ ಮಾಡಿದವರು ಎಂದರು.

ತಾಲೂಕು ಬೋರ್ಡ್ ಸದಸ್ಯರಿಂದ ಶಾಸಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಈಗ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರಿಗೆ ವರುಣಾ ನಾಲೆ ಅನುಷ್ಠಾನಗೊಳಿಸಿದ್ದೇ ಸಿದ್ದರಾಮಯ್ಯ ಎಂದರು.

ಗಣಿ ಲೂಟಿ ಮಾಡಿದವರನ್ನು ಜೈಲಿಗೆ ಹಾಕಿಸಿದವರೇ ಸಿದ್ದರಾಮಯ್ಯ. ಐದು ವರ್ಷ ಕೋಮುಗಲಭೆಗಳಿಗೆ, ಜಾತಿಗಲಭೆಗಳಿಗೆ  ಯಾವುದೇ ಗಲಭೆಗೆ ಅವಕಾಶ ನೀಡದೇ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸಿದರು. ಕರ್ನಾಟಕವನ್ನು ಶಾಂತಿಪ್ರಿಯರಾಜ್ಯವನ್ನಾಗಿ ಮಾಡಿದವರು ಸಿದ್ದರಾಮಯ್ಯನವರು. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯನವರ ಪರವಾಗಿ ನಿಂತು ಅವರ ಕೆಲಸಗಳನ್ನು ಪ್ರೋತ್ಸಾಹಿಸಿ, ಅವರ ಕೆಲಸಗಳನ್ನು ಮೆಚ್ಚಿದೆ. ಸದನದಲ್ಲಿ ಯಾವುದೇ ವಿಚಾರದ ಬಗ್ಗೆಯೂ ಮಾತನಾಡುವಂತಹ ನಾಯಕ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಬರಲು ಸಾಧ್ಯವೇ ಆಗಿಲ್ಲ.  ನೂತನ ಶಾಸಕರಿಗೆ ಉತ್ತಮ ಮಾರ್ಗದರ್ಶನವನ್ನು ನೀಡುವಂತಹ ಕೆಲಸವನ್ನು ಕೂಡ ಮಾಡಿದ್ದಾರೆ. ಇಂದು ಅವರ ಹೆಸರಿನಲ್ಲಿ ಬ್ರಿಗೇಡ್ ನ್ನು ಉದ್ಘಾಟನೆ ಮಾಡುತ್ತಿರುವುದು ಸಂತಸದ ವಿಚಾರ, ಬ್ರಿಗೇಡ್ ಒಳ್ಳೆಯ ಗುರಿ ಇಟ್ಟುಕೊಂಡಿದೆ. ಒಳ್ಳೆಯ ಕೆಲಸ ಮಾಡಿ ಒಳ್ಳೆಯ ಹೆಸರು ಸಂಪಾದನೆ ಮಾಡಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮತ್ತಿತರ ಕಾಂಗ್ರೆಸ್ ಮುಖಂಡರು,ಬ್ರಿಗೇಡ್ ನ ರಾಜ್ಯ ಘಟಕದ ಅಧ್ಯಕ್ಷ ಹಿನಕಲ್ ಉದಯ್, ಬ್ರಿಗೇಡ್ ನ ಗೌರವಾಧ್ಯಕ್ಷ ಕೆ.ಮಾರುತಿ, ಉಪಾಧ್ಯಕ್ಷ ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)