varthabharthi


ರಾಷ್ಟ್ರೀಯ

39,000 ರೈಲು ಚಕ್ರಗಳ ಪೂರೈಕೆಗಾಗಿ ಚೀನಾ ಕಂಪೆನಿಗೆ ಗುತ್ತಿಗೆ ನೀಡಿದ ಭಾರತೀಯ ರೈಲ್ವೆ

ವಾರ್ತಾ ಭಾರತಿ : 17 May, 2022

 ಹೊಸದಿಲ್ಲಿ: ಭಾರತೀಯ ರೈಲ್ವೆಯು ತನಗಾಗಿ 39,000 ರೈಲು ಚಕ್ರಗಳ ಪೂರೈಕೆಗಾಗಿ ಚೀನೀ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿದೆ. ರಷ್ಯಾ_ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಇತರ ದೇಶಗಳಿಂದ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಹಿನ್ನೆಲೆಯಲ್ಲಿ ಚೀನಾ ಕಂಪನಿಗೆ ಗುತ್ತಿಗೆ ದೊರಕಿದೆ ಎಂದು ತಿಳಿದು ಬಂದಿದೆ.

ಟಿಝೆಡ್ (ತೈಝಾಂಗ್) ಹಾಂಕಾಂಗ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಎಂಬ ಸಂಸ್ಥೆಗೆ  ಸಾಲಿಡ್ ಫೋಜ್ರ್ಡ್ ವೀಲ್ಸ್ ಸರಬರಾಜಿಗೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆಯು ವಂದೇ ಭಾರತ್ ರೈಲುಗಳಿಗಾಗಿ ಎಂದು ತಿಳಿದು ಬಂದಿದೆ.

ಈ ಟೆಂಡರ್ ಮೌಲ್ಯ ಕೇವಲ ರೂ 170 ಕೋಟಿ ಆಗಿದ್ದರೂ  ಚೀನಾದೊಂದಿಗೆ ಗಲ್ವಾನ್ ಕಣಿವೆಯಲ್ಲಿ ಗಡಿ ಸಂಘರ್ಷದ ನಂತರ  ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ದೇಶಗಳಲ್ಲಿ ಹೂಡಿಕೆ ಮತ್ತು ಅಲ್ಲಿಂದ ಪೂರೈಕೆಗಳಿಗೆ ಸಂಬಂಧಿಸಿದಂತೆ ಭಾರತ ಹೇರಿದ್ದ ನಿರ್ಬಂಧಗಳ ಹಿನ್ನೆಲೆಯಲ್ಲಿ ಇದು  ಮಹತ್ವ ಪಡೆದಿದೆ.

ಈ ನಿರ್ದಿಷ್ಟ ಕಂಪೆನಿಗೆ ಈ ಹಿಂದೆ ಮಾರ್ಚ್ 2020ರಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ನಿರ್ದಿಷ್ಟ ರೈಲು ಚಕ್ರಗಳಿಗಾಗಿನ ಟೆಂಡರ್ ಅನ್ನು  ಎಪ್ರಿಲ್ 4 ರಂದು ಆಹ್ವಾನಿಸಲಾಗಿತ್ತು ಹಾಗೂ ಮೇ 2ರಂದು ಟೆಂಡರ್ ಅಂತಿಮಗೊಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)