ಎಸೆಸೆಲ್ಸಿ ಫಲಿತಾಂಶ: ಬಣಕಲ್ ನ ಅವಳಿ ಸಹೋದರಿಯರು ಎ+ ಗ್ರೇಡ್ ನಲ್ಲಿ ಉತ್ತೀರ್ಣ
ಆಯೇಷಾ ನೂಹಾ (ಎಡಚಿತ್ರ), ಆಯೇಷಾ ನಿದಾ
ಮೂಡಿಗೆರೆ, ಮೇ 22: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಣಕಲ್ ತಾಲೂಕಿನ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಆಯೇಷಾ ನೂಹಾ ಮತ್ತು ಆಯೇಷಾ ನಿದಾ 'ಎ+' ಗ್ರೇಡ್ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಅವಳಿ ಸಹೋದರಿಯರಾಗಿರುವ ಇವರ ಪೈಕಿ ಆಯೇಷಾ ನೂಹಾ 598 (95.68%) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಆಯೇಷಾ ನಿದಾ 593 (94.88%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ.
ಇವರು ಬಣಕಲ್ ನಿವಾಸಿಗಳಾದ ಬಿ.ಅಬೂಬಕರ್ ಮತ್ತು ನಜ್ಮಾ ಬೇಗಮ್ ದಂಪತಿಯ ಪುತ್ರಿಯರಾಗಿದ್ದಾರೆ.
Next Story