varthabharthi


ದಕ್ಷಿಣ ಕನ್ನಡ

ಬಿಜೆಪಿ ಯುವ ಮೋರ್ಚಾ ಮುಲ್ಕಿ ಮೂಡುಬಿದಿರೆ ಮಂಡಲದ ಕಾರ್ಯನಿರ್ವಾಹಣ ತಂಡದ ಸಭೆ

ವಾರ್ತಾ ಭಾರತಿ : 23 May, 2022

ಕಟೀಲು, ಮೇ 23: ಬಿಜೆಪಿ ಯುವ ಮೋರ್ಚಾ ಮುಲ್ಕಿ ಮೂಡುಬಿದಿರೆ ಮಂಡಲದ ಕಾರ್ಯನಿರ್ವಾಹಣ ತಂಡದ ಸಭೆಯು ರವಿವಾರ ಎಕ್ಕಾರು ಮಹಾಶಕ್ತಿ ಕೇಂದ್ರದ ಮಧ್ಯ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ಗಿರಿಜಾ‌ ಎಂ. ಸಭಾಭವನದಲ್ಲಿ ನಡೆಯಿತು.

ಇದೇ ಸಂದರ್ಭ ಯುವ ಮೋರ್ಚಾ ಮೂಲ್ಕಿ ಮೂಡುಬಿದಿರೆ ಮಂಡಲದ ಎಲ್ಲಾ ಪದಾದಿಕಾರಿಗಳು ಮತ್ತು ಸದಸ್ಯರಿಗೆ ಟೀ ಶರ್ಟ್ ಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಅದ್ಯಕ್ಷ ಸುನೀಲ್ ಆಳ್ವ, ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೆರ, ಯುವ ಮೋರ್ಚಾ ಮೂಲ್ಕಿ ಮೂಡುಬಿದಿರೆ ಮಂಡಲದ ಅದ್ಯಕ್ಷ ಅಶ್ವಥ್ ಪಣಪಿಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಉಪಾಧ್ಯಕ್ಷ ಈಶ್ವರ್ ಕಟೀಲ್, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈ ಮಾರ್ನಾಡ್ ಮತ್ತು  ಸುದರ್ಶನ್ ಬಜ, ಉಪಾಧ್ಯಕ್ಷ ಅಭಿಲಾಷ್ ಕಟೀಲ್, ಜಿಲ್ಲಾ ಯುವ ಮೋರ್ಚಾ ಕೋಶಾಧಿಕಾರಿ ಮುಲ್ಕಿ ಮೂಡುಬಿದಿರೆ ಮಂಡಲದ ಸಹ ಪ್ರಭಾರಿ ರಕ್ಷಿತ್ ಹಾಗೂ ಮಂಡಲ ಯುವ ಮೋರ್ಚಾದ ಪದಾದಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು ಉಪಸ್ಥಿತಿಯಲ್ಲಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)