varthabharthi


ಕರಾವಳಿ

ಕಾಞಂಗಾಡ್: ಎಂಡೋ ಸಂತ್ರಸ್ತ ಬಾಲಕ ಮೃತ್ಯು

ವಾರ್ತಾ ಭಾರತಿ : 23 Jun, 2022

ಸಾಂದರ್ಭಿಕ ಚಿತ್ರ (source: PTI)

ಕಾಸರಗೋಡು, ಜೂ.23: ಎಂಡೋಸಲ್ಫಾನ್ ಸಂತ್ರಸ್ತ ಬಾಲಕನೋರ್ವ ಮೃತಪಟ್ಟ ಘಟನೆ ಕಾಞಂಗಾಡ್ ನಲ್ಲಿ ನಡೆದಿರುವುದು ವರದಿಯಾಗಿದೆ.

ಕಾಞಂಗಾಡ್ ನಿವಾಸಿ ರಾಜನ್  ಎಂಬವರ ಪುತ್ರ ಶ್ರೀರಾಜ್ (8) ಮೃತಪಟ್ಟ ಬಾಲಕ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಶ್ರೀ ರಾಜ್ ನನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ.

ಜನ್ಮತಃ ಅಂಗವೈಕಲ್ಯ ಹೊಂದಿದ್ದ ಶ್ರೀರಾಜ್ ನನ್ನು 2017ರಲ್ಲಿ ನಡೆದ ಎಂಡೋ ಸಂತ್ರಸ್ತರ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿದ್ದರೂ ಇದುವರೆಗೆ ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಯಲ್ಲಿ ಆತನ ಹೆಸರು ಸೇರ್ಪಡೆಗೊಂಡಿಲ್ಲ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)