varthabharthi


ಕ್ರೀಡೆ

ರಣಜಿ ಟ್ರೋಫಿ ಫೈನಲ್: ಶತಕ ಸಿಡಿಸಿ ಭಾವೋದ್ವೇಗಕ್ಕೆ ಒಳಗಾದ ಮುಂಬೈ ಬ್ಯಾಟರ್ ಸರ್ಫರಾಝ್ ಖಾನ್

ವಾರ್ತಾ ಭಾರತಿ : 23 Jun, 2022

ಬೆಂಗಳೂರು: ಮಧ್ಯಪ್ರದೇಶ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನ 2 ನೇ ದಿನವಾದ ಬುಧವಾರ  ಮುಂಬೈ ಬ್ಯಾಟರ್ ಸರ್ಫರಾಝ್  ಖಾನ್ ಅವರು ಶತಕವನ್ನು ತಲುಪಿದಾಗ ಭಾವೋದ್ವೇಗಕ್ಕೆ ಒಳಗಾದರು.

24ರ ಹರೆಯದ ಖಾನ್ ಅವರು ಶತಕದ ಸಂಭ್ರಮ ಆಚರಿಸುತ್ತಿರುವಾಗ  ಭಾವೋದ್ವೇಗಕ್ಕೆ ಒಳಗಾದರು. ಅವರು ಹೆಲ್ಮೆಟ್ ತೆಗೆದಾಗ ಕಣ್ಣೀರಿಟ್ಟರು.  ಶಿಖರ್ ಧವನ್ ಶೈಲಿಯಲ್ಲಿ ತೊಡೆ ತಟ್ಟಿ ಸಂಭ್ರಮಿಸಿದರು.

ಸರ್ಫರಾಝ್ ಈ  ಋತುವಿನಲ್ಲಿ ಸಿಡಿಸಿದ  ನಾಲ್ಕನೇ ಶತಕ ಹಾಗೂ  ಒಟ್ಟಾರೆಯಾಗಿ ಅವರ ಎಂಟನೇ ಪ್ರಥಮ ದರ್ಜೆ ಶತಕ ಇದಾಗಿದೆ. ಸರ್ಫರಾಝ್  ಶತಕವನ್ನು ತಲುಪಿದ ಕ್ಷಣದ ವೀಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

"ಇದು  ಅತ್ಯಂತ  ಪ್ರಮುಖ  ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಾಖಲಾದ  ಅದ್ಭುತವಾದ ಇನಿಂಗ್ಸ್  ಆಗಿದೆ" ಎಂದು ಬಿಸಿಸಿಐ ವೀಡಿಯೊದಲ್ಲಿ ತಿಳಿಸಿದೆ.

ಸರ್ಫರಾಝ್  ಖಾನ್  ಪ್ರತಿನಿಧಿಸುವ ಐಪಿಎಲ್ ತಂಡ  ಡೆಲ್ಲಿ ಕ್ಯಾಪಿಟಲ್ಸ್ ಕೂಡ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು "100 ಶೇ. ಶುದ್ಧ ಭಾವನೆಗಳು" ಎಂದು ಬರೆದಿದೆ.

ಸರ್ಫರಾಝ್  ಇಂದು  40 ರನ್ ನಿಂದ  ದಿನದಾಟ ಆರಂಭಿಸಿದರು. 152 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮುಂಬೈ ಇನ್ನೊಂದು ತುದಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತು. ಸರ್ಫರಾಝ್ ಅವರು 50 ರನ್  ತಲುಪಿದ ನಂತರ ವೇಗವಾಗಿ ಆಡಲು ಆರಂಭಿಸಿದರು.

ಅರ್ಧಶತಕವನ್ನು ತಲುಪಿದ ನಂತರ  ಮುಂದಿನ ಐವತ್ತು ರನ್‌ಗಳನ್ನು ಕೇವಲ 38 ಎಸೆತಗಳಲ್ಲಿ ಗಳಿಸಿ ಮುಂಬೈ 300 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.

2 ನೇ ದಿನದ ಭೋಜನ ವಿರಾಮದ  ವೇಳೆಗೆ ಮುಂಬೈ 8 ವಿಕೆಟ್ ನಷ್ಟಕ್ಕೆ 351 ರನ್ ತಲುಪಿತು, ಸರ್ಫರಾಝ್  119 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದರು.

ಮುಂಬೈ ನಾಯಕ ಪೃಥ್ವಿ ಶಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಯಶಸ್ವಿ ಜೈಸ್ವಾಲ್ ಹಾಗೂ  ಶಾ 87 ರನ್‌ಗಳ ಆರಂಭಿಕ ಜೊತೆಯಾಟವನ್ನು ನಡೆಸಿದ್ದರು, ನಾಯಕ ಶಾ  47 ರನ್‌ಗಳಿಗೆ ಔಟಾದರು.

ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬಿದ್ದಾಗಲೂ ಜೈಸ್ವಾಲ್ 78 ರನ್ ಗಳಿಸಿದರು. ಮುಂಬೈ ಬುಧವಾರ ಮೊದಲ ದಿನದಾಟದಲ್ಲಿ  5 ವಿಕೆಟ್ ಗೆ 248 ರನ್ ಗಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)