ರಾಷ್ಟ್ರೀಯ
ಉದ್ಧವ್ ಠಾಕ್ರೆ ಕರೆದ ಸಭೆಗೆ ಕೇವಲ 13 ಶಾಸಕರು ಹಾಜರು

Photo:PTI
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಕರೆದಿರುವ ಸಭೆಯಲ್ಲಿ ಶಿವಸೇನೆಯ ಕೇವಲ 13 ಶಾಸಕರು ಹಾಜರಾಗಿದ್ದಾರೆ ಎಂದು NDTV ವರದಿ ಮಾಡಿದೆ.
ಸುಮಾರು 41 ಶಾಸಕರ ಜೊತೆಗೆ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆ ಹಿರಿಯ ನಾಯಕ ಏಕನಾಥ ಶಿಂಧೆ, ಮಹಾರಾಷ್ಟ್ರ ಮುಖ್ಯಮಂತ್ರಿ ತನ್ನ ಬಾಗಿಲುಗಳನ್ನು ಮುಚ್ಚುತ್ತಿದ್ದರು. ನಮ್ಮನ್ನು ಗಂಟೆಗಟ್ಟಲೆ ಹೊರಗೆ ಕಾಯಿಸುತ್ತಿದ್ದರು. 2.5 ವರ್ಷಗಳಿಂದ ನಮಗೆ ಮುಖ್ಯಮಂತ್ರಿ ನಿವಾಸಕ್ಕೆ ಪ್ರವೇಶಿಸಲು ಅವಕಾಶ ನೀಡಿಲ್ಲ ಎಂದು ಪತ್ರವೊಂದರಲ್ಲಿ ಆರೋಪಿಸಿದ್ದಾರೆ.
"ನಿನ್ನೆಯ ತನಕ ಶಿಂಧೆ ಬಳಿ 37 ಶಿವಸೇನೆ ಶಾಸಕರಿದ್ದರು. ಇಂದು ನಾನು ಹಾಗೂ ಇತರ ಮೂವರು ಶಾಸಕರು, ಓರ್ವ ಪಕ್ಷೇತರ ಶಾಸಕ ಗುವಾಹಟಿಗೆ ತಲುಪಿದ್ದೇವೆ. ಇನ್ನೂ ಇಬ್ಬರು ಕೆಲವೇ ಹೊತ್ತಿನಲ್ಲಿ ಗುವಾಹಟಿಗೆ ಬರಲಿದ್ದಾರೆ'' ಎಂದು ಶಿವಸೇನೆ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ