varthabharthi


ದಕ್ಷಿಣ ಕನ್ನಡ

ಜೂ.24ರಿಂದ ಶರಫುಲ್ ಉಲಮಾ 3ನೇ ಉರೂಸ್ ಹಾಗೂ ಸನದುದಾನ ಸಮ್ಮೇಳನ

ವಾರ್ತಾ ಭಾರತಿ : 23 Jun, 2022

ಕೊಣಾಜೆ, ಜೂ.23: ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಸ್ಥಾಪಕ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ (ನ.ಮ) ರವರ 3ನೇ ಉರೂಸ್ ಮುಬಾರಕ್ ಹಾಗೂ ಸನದುದಾನ ಸಮ್ಮೇಳನವು ಜೂ.24ರಿಂದ 26ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅಲ್ ಮದೀನಾ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ತಿಳಿಸಿದ್ದಾರೆ.

ಅವರು ಗುರುವಾರ ಅಲ್ ಮದೀನಾ ದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.24ರಂದು ಸಂಜೆ 5 ಗಂಟೆಗೆ ಸ್ವಾಗತ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜಿ ಬಾಂಬೆ ಧ್ವಜಾರೋಹಣಗೈಯಲಿದ್ದಾರೆ. ಸೈಯದ್ ಇಸ್ಮಾಯೀಲ್ ಹಾದಿ ತಂಙಳ್ ಮಖಾಂ ಝಿಯಾರತ್ ನೇತೃತ್ವ ವಹಿಸಲಿದ್ದಾರೆ. ಸಂಜೆ 7ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸೈಯದ್ ಕೆ.ಎಸ್.ಆಟಕ್ಕೋಯ ದುಆ ನಿರ್ವಹಿಸಲಿದ್ದು, ಮಹ್ಮೂದ್ ಫೈಝಿ ವಾಲೆಮುಂಡೇವು ಉದ್ಘಾಟಿಸಲಿದ್ದಾರೆ. ಯೂನುಸ್ ಮರ್ಝೂಕಿ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. 8:30ಕ್ಕೆ ಜಲಾಲಿಯ ರಾತೀಬ್ ಸೈಯದ್ ಜಾಫರ್ ಸಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ನಡೆಯಲಿದೆ ಎಂದರು

    ಜೂನ್ 25 ರಂದು ಬೆಳಗ್ಗೆ 10 ಗಂಟೆಗೆ ಸೈಯದ್ ಅಶ್ರಫ್ ಅಲ್-ಸಖಾಫ್ ತಂಙಳ್ ಆದೂರ್  ನೇತೃತ್ವದಲ್ಲಿ ಖತಮುಲ್ ಕುರ್ ಆನ್  ಮಜ್ಲಿಸ್  ನಡೆಯಲಿದ್ದು, ಸಂಜೆ 4:30ಕ್ಕೆ ನಾರಿಯತ್ ಸ್ವಲಾತ್ ಮಜ್ಲಿಸ್ , ರಾತ್ರಿ 7:30ಕ್ಕೆ ಸೈಯದ್ ಅಥಾವುಲ್ಲಾ ತಂಙಳ್ ರವರ ನೇತೃತ್ವದಲ್ಲಿ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ನಡೆಯಲಿದೆ. 

    ಜೂ.26ರಂದು ಬೆಳಗ್ಗೆ10:15ಕ್ಕೆ ಮುತಅಲ್ಲಿಂ ಸಮಾವೇಶ, 12ಕ್ಕೆ  ಶೈಖುನಾ ಶರಫುಲ್ ಉಲಮಾರ ಸಾಹಿತ್ಯಿಕ ಕೊಡುಗೆಗಳ ಕುರಿತ ಅವಲೋಕನ  'ಅತ್ತಸ್ನೀಫ್', ಅಪರಾಹ್ನ 2 ಗಂಟೆಗೆ ಮಹಿಳಾ ಶರೀಅತ್ ಕಾಲೇಜಿನ ಸ್ವಾಫಿಯಾ ಸನದುದಾನ, 3:30ಕ್ಕೆ ಮರ್ಝೂಕಿ ಹಾಗೂ ಹಿಫ್ಲ್ ಸನದುದಾನ ಹಾಗೂ ಸಮಾರೋಪ ಸಮಾರಂಭ  ನಡೆಯಲಿದೆ. ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸೈಯದ್ ಕೂರತ್ ತಂಙಳ್ ದುಆ ನೆರವೇರಿಸಲಿದ್ದು, ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಹುಸೈನ್ ಸಖಾಫಿ ಚುಳ್ಳಿಕೋಡ್, ಹಾಜಿ ಯೆನಪೋಯ ಅಬ್ದುಲ್ಲ ಕುಂಞಿ, ಯು.ಟಿ.ಖಾದರ್, ಹುಸೈನ್ ಸಅದಿ ಕೆ.ಸಿ. ರೋಡ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಡಾ.ಝೈನಿ ಕಾಮಿಲ್, ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುಲ್ ಲತೀಫ್  ಸಅದಿ ಹಾಗೂ ಮತ್ತಿತರ  ಉಲಮಾ ಉಮರಾ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ  ಎನ್.ಎಸ್.ಕರೀಂ, ಮಜೀದ್ ಹಾಜಿ, ಫಾರೂಕ್ ಹಾಜಿ, ಕೆಎಂಕೆ ಮಾಸ್ಟರ್, ಮುನೀರ್ ಸಖಾಫಿ, ಅಬ್ದುರ್ರಝಾಕ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)