varthabharthi


ಅಂತಾರಾಷ್ಟ್ರೀಯ

ಇಕನಾಮಿಸ್ಟ್‌ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿಯೇ ಅತ್ಯಂತ ಜೀವನಯೋಗ್ಯ ನಗರ ಯಾವುದು ಗೊತ್ತೇ?

ವಾರ್ತಾ ಭಾರತಿ : 23 Jun, 2022

Photo: Britannica

ಪ್ಯಾರಿಸ್: ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾ ವಿಶ್ವದ ಅತ್ಯಂತ ಹೆಚ್ಚು ಜೀವನಯೋಗ್ಯ ನಗರವೆಂದು  ಇಕಾನಮಿಸ್ಟ್‌ ಪತ್ರಿಕೆ ಪ್ರಕಟಿಸಿದ ವಾರ್ಷಿಕ ವರದಿ ಹೇಳಿದೆ.

ಕಳೆದ ಬಾರಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಆಕ್‌ಲ್ಯಾಂಡ್‌ ಈ ಬಾರಿ 34ನೇ ಸ್ಥಾನಕ್ಕೆ ಕುಸಿದಿದೆ. ಕೋವಿಡ್‌ ನಿರ್ಬಂಧಗಳೇ ಇದಕ್ಕೆ ಕಾರಣ ಎಂದು ಇಕನಾಮಿಸ್ಟ್‌ ಇಂಟಲಿಜೆನ್ಸ್‌ ಯೂನಿಟ್‌ ತಿಳಿಸಿದೆ.

ಕಳೆದ ವರ್ಷ ವಿಯೆನ್ನಾ 12ನೇ ಸ್ಥಾನದಲ್ಲಿತ್ತು. ಆ ಸಂದರ್ಭ ಸಾಂಕ್ರಾಮಿಕದಿಂದ ಅದರ ಮ್ಯೂಸಿಯಂಗಳು ಮತ್ತು ರೆಸ್ಟಾರೆಂಟ್‌ಗಳು ಮುಚ್ಚಿದ್ದೇ ಇದಕ್ಕೆ ಕಾರಣವಾಗಿದೆ. ಆದರೆ ಈಗ ಪುಟಿದೆದ್ದಿರುವ ಈ ನಗರ ಮೊದಲ ಸ್ಥಾನವನ್ನು ತನ್ನದಾಗಿಸಿದೆ.

ಎರಡನೇ ಸ್ಥಾನವು ಡೆನ್ಮಾರ್ಕ್‌ ರಾಜಧಾನ ಕಾಪೆನ್‌ಹ್ಯಾಗನ್‌ಗೆ ಹೋಗಿದ್ದರೆ, ಸ್ವಿಝರ್ಲ್ಯಾಂಡ್‌ನ ಝೂರಿಚ್‌ ನಂತರದ ಸ್ಥಾನ ಪಡೆದಿದೆ, ಮೂರನೇ ಸ್ಥಾನವನ್ನು ಕಾಲ್ಗರಿ ಕೂಡ ಹಂಚಿಕೊಂಡಿದೆ. ಐದನೇ ಸ್ಥಾನದಲ್ಲಿ ವಾಂಕೂವರ್‌ ಇದ್ದರೆ ಜಿನೀವಾ ಆರನೇ ಸ್ಥಾನದಲ್ಲಿ, ಜರ್ಮನಿಯ ಫ್ರಾಂಕ್‌ಫರ್ಟ್‌ ಏಳನೇ ಸ್ಥಾನದಲ್ಲಿ, ಟೊರೊಂಟೋ ಎಂಟನೇ ಸ್ಥಾನದಲ್ಲಿ ಮತ್ತು ನೆದರ್‌ಲ್ಯಾಂಡ್ಸ್‌ನ ಆಮ್‌ಸ್ಟೆರ್ಡಾಮ್‌  ಓಂಬತ್ತನೇ  ಸ್ಥಾನದಲ್ಲಿದೆ.

ಹತ್ತನೇ ಸ್ಥಾನವನ್ನು ಜಪಾನ್‌ನ ಒಸಾಕ ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಹಂಚಿಕೊಂಡಿವೆ. ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ 19ನೇ ಸ್ಥಾನದಲ್ಲಿ  ಮತ್ತು ಬೆಲ್ಜಿಯಂ ರಾಜಧಾನಿ ಬ್ರಸ್ಸೆಲ್ಸ್‌ 24ನೇ ಸ್ಥಾನದಲ್ಲಿವೆ. ಇಂಗ್ಲೆಂಡ್‌ ರಾಜಧಾನಿ ಲಂಡನ್‌ 33ನೇ ಸ್ಥಾನ ಪಡೆದುಕೊಂಡಿದ್ದರೆ, ಸ್ಪೇನ್‌ನ ಬಾರ್ಸಿಲೋನಾ  ಮತ್ತು ಮ್ಯಾಡ್ರಿಡ್‌ ಕ್ರಮವಾಗಿ 35 ಹಾಗೂ 43ನೇ ಸ್ಥಾನಗಳನ್ನು ಪಡೆದುಕೊಂಡಿವೆ.

ಇಟಲಿಯ ಮಿಲಾನ್‌, ಅಮೆರಿಕಾದ ನ್ಯೂಯಾರ್ಕ್‌ ಮತ್ತು ಚೀನಾದ ಬೀಜಿಂಗ್‌ ನಗರ ಕ್ರಮವಾಗಿ 49ನೇ 51ನೇ ಮತ್ತು 71ನೇ ಸ್ಥಾನದಲ್ಲಿವೆ. ಈ ಸಮೀಕ್ಷೆಯಲ್ಲಿ ಮಾಸ್ಕೋ 15 ಸ್ಥಾನಗಳಷ್ಟು ಕೆಳಗೆ ಕುಸಿದಿದ್ದರೆ ಸೈಂಟ್‌ ಪೀಟರ್ಸ್‌ಬರ್ಗ್‌ 13 ಸ್ಥಾನಗಳಷ್ಟು ಕುಸಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)