varthabharthi


ದಕ್ಷಿಣ ಕನ್ನಡ

ರಾಜ್ಯ ವಿಂಗಡಣೆಯ ಪ್ರಧಾನಿ ಪ್ರಸ್ತಾಪಕ್ಕೆ ನನ್ನ ಬೆಂಬಲ: ಉಮೇಶ್ ಕತ್ತಿ

ವಾರ್ತಾ ಭಾರತಿ : 23 Jun, 2022

ಬೆಳ್ತಂಗಡಿ, ಜೂ.23: ದೇಶದಲ್ಲಿ ಹೊಸದಾಗಿ ರಾಜ್ಯ ರಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಎರಡು ರಾಜ್ಯ ರಚಿಸುವ ಪ್ರಸ್ತಾಪ ಇದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ಅರಣ್ಯ ಮತ್ತು ರಾಜ್ಯ ಆಹಾರ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ತಾಲೂಕಿನ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

  ಹಿಂದೆ ರಾಜ್ಯ ರಚನೆಯಾದಾಗ ಇದ್ದ ಜನಸಂಖ್ಯೆ ಮತ್ತು ಪ್ರಸಕ್ತ ಜನಸಂಖ್ಯೆ ಹೋಲಿಸಿದಾಗ ದೇಶದಲ್ಲಿ ಹೊಸ ರಾಜ್ಯಗಳ ರಚನೆಯಾಗಬೇಕಾದ ಅಗತ್ಯ ವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ  ಪ್ರಸ್ತಾಪವನ್ನು ತಾನು ಸ್ವಾಗತಿಸುವುದಾಗಿ ಉಮೇಶ್ ಕತ್ತಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)