ಕೆಜಿಎಫ್ ಹಿಂದೂ ವಿರೋಧಿಯೇ?: ಬಲಪಂಥೀಯರ #BoycottShamshera ಅಭಿಯಾನಕ್ಕೆ ನೆಟ್ಟಿಗರ ಪ್ರಶ್ನೆ
ಮುಂಬೈ: ಸುದೀರ್ಘ ನಾಲ್ಕು ವರ್ಷಗಳ ವಿರಾಮದ ಬಳಿಕ ತೆರೆಕಾಣಲಿರುವ ರಣಬೀರ್ ಕಪೂರ್ ಅವರ ಎರಡು ಚಿತ್ರಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಅಭಿಯಾನ ನಡೆಸುತ್ತಿದ್ದಾರೆ. ʼಬ್ರಹ್ಮಾಸ್ತ್ರ: ಭಾಗ-1ʼ ಹಾಗೂ ʼಶಂಶೇರಾʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಹಿಂದೂ ನಂಬಿಕೆಗಳನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ಬಲಪಂಥೀಯರು ಈ ಎರಡೂ ಚಿತ್ರವನ್ನು ಬಹಿಷ್ಕರಿಸಲು ಅಭಿಯಾನ ನಡೆಸಿದ್ದಾರೆ.
ಬ್ರಹ್ಮಾಸ್ತ್ರ ಚಿತ್ರದ ಟ್ರೇಲರಿನ ವಿವಿಧ ದೃಶ್ಯಗಳಲ್ಲಿ ಹಿಂದೂ ನಂಬಿಕೆಗಳಿಗೆ ಅಗೌರವ ತೋರುವ ಸನ್ನಿವೇಶಗಳಿವೆಯೆಂದು ಪ್ರತಿಪಾದಿಸಲಾಗಿದ್ದು, ರಣಬೀರ್ ಕಪೂರ್ ಹಾರಿ ಗಂಟೆ ಬಾರಿಸುವ ದೃಶ್ಯವನ್ನು ಹಲವರು ವಿರೋಧಿಸಿದ್ದರು. ದೃಶ್ಯದಲ್ಲಿ ಪಾದರಕ್ಷೆ ಧರಿಸಿರುವುದು ಕಂಡು ಬಂದಿದ್ದು, ದೇವಸ್ಥಾನದೊಳಗೆ ಪಾದರಕ್ಷೆ ಧರಿಸಿ, ನಂಬಿಕೆಗಳಿಗೆ ಘಾಸಿ ಮಾಡಲಾಗಿದೆ ಎಂದು ಬಲಪಂಥೀಯರು ಆರೋಪಿಸಿ ಈ ಹಿಂದೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಅಂತಹದ್ದೇ ಬಹಿಷ್ಕಾರದ ಕರೆ ಇದೀಗ ಶಂಶೇರಾ ಚಿತ್ರಕ್ಕೂ ಬಂದೊದಗಿದೆ.
ಚಿತ್ರದಲ್ಲಿ ಸಂಜಯ್ ದತ್ ನಿರ್ವಹಿಸುತ್ತಿರುವ ಖಳನಾಯಕನ ಹೆಸರು ಮತ್ತು ಪಾತ್ರ ಕಾಣಿಸಿಕೊಂಡಿರುವ ಬಗೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬ್ರಾಹ್ಮಣ ಗುರುತನ್ನು ಹೊಂದಿರುವ ಶುದ್ಧ್ ಸಿಂಗ್ (ಸಂಜಯ್ ದತ್) ಪಾತ್ರ ಈ ಚಿತ್ರದಲ್ಲಿ ಖಳನಟ, ಇದು ಸನಾತನ ಧರ್ಮದ ಮೌಲ್ಯಗಳಿಗೆ ಎಸಗಿದ ಅಪಚಾರ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹಿಂದೂ ಪವಿತ್ರ ಚಿಹ್ನೆಗಳಾದ ತ್ರಿಪುಂದ್ರ ಮತ್ತು ಶಿಖಾವನ್ನು ನಕರಾತ್ಮಕ ಪಾತ್ರಗಳಿಗೆ ಬಳಸಿದ ರೀತಿಯು ಬಾಲಿವುಡ್ನ ಹಿಂದೂ ವಿರೋಧಿ ಮನಸ್ಥಿತಿ ಮುಂದುವರೆದಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇನ್ನೊಬ್ಬರು ಬರೆದಿದ್ದಾರೆ.
ಆದರೆ, ಈ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, ರಾವಣ ನಕರಾತ್ಮಕ ಪಾತ್ರವಾಗಿತ್ತು, ಆದರೆ ಶಿವನ ಭಕ್ತವೂ ಹೌದು. ರಾವಣನ ಪಾತ್ರ ನಿರ್ವಹಿಸುವವರು ಹಿಂದೂ ಚಿಹ್ನೆಗಳನ್ನು ಧರಿಸಬಾರದೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರ ಕೆಜಿಎಫ್ ಚಿತ್ರದ ಗರುಡ ಪಾತ್ರವನ್ನು ಎಳೆದು ತಂದಿದ್ದು, ಗರುಡ ಒಬ್ಬ ಕಾಳಿ ಮಾತೆಯ ಭಕ್ತನಾಗಿದ್ದ. ಆ ಪಾತ್ರ ಕ್ರೂರವಾಗಿರಲಿಲ್ಲವೇ? ದಕ್ಷಿಣ ಭಾರತೀಯ ಚಿತ್ರಗಳು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆಂದು ಯಾರೂ ಯಾಕೆ ಅಭಿಯಾನ ಮಾಡಲಿಲ್ಲವೆಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಇದೇ ವಾದವನ್ನು ಮುಂದಿಟ್ಟಿದ್ದು, ʼಗರುಡನಿಗೆ ಟಿಕಾ ಇದ್ದಾಗ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಸಂಜಯ್ ದತ್ ಅದನ್ನು ಮಾಡಿದಾಗ ಎಲ್ಲರೂ ಅದನ್ನು ಪ್ರಶ್ನಿಸುತ್ತಾರೆ #Shamsheraʼ ಎಂದು ಟ್ವೀಟ್ ಮಾಡಿದ್ದಾರೆ.
People have no problem when garuda has a tika
— WordMinter (@SimonMinter7_) June 22, 2022
But when Sanjay dutt does it then everyone is questioning it#Shamshera pic.twitter.com/dnZbvIjoF4
#BoycottShamshera
— Anant (@anantnavgire1) June 22, 2022
Show's hindu as criminal and it's identity. https://t.co/IZfZbIHxzh
Bro Ravan( shivji bhakt ), Udaybhan bhi hindu the aur villan bhi the aur unhe dikhaya bhi hai
— Batman (@Harshal99944832) June 22, 2022
Aur Ghori, Aurangabad bhi villan the aur unhe bhi villan hi dikhaya hai
So dont hate unnecessarily
He is not cruel , Garuda was also Devi Mata bhakat , then you won't say that south is making fun of hindusim
— your it (@Utkarsh0055) June 22, 2022
He is hindu who is forced by British to do so
Another attempt of Bollywood to highlight Shiv Tilak and make Hindus the villains. No doubt, this movie deserves to be trashed in mass. #BoycottBollywood #BoycottShamshera pic.twitter.com/LUvLghjoUV
— S (@OneUnnamedGirl) June 22, 2022
Do u really think we guys are dumb? That we don’t understand what are you tryna do? This guys seems more of a hitler in the movie and you used Tri-Pundra tilak? @karanmalhotra21. Stop defaming Hindu culture! And @duttsanjay ap khud ek hindu h apko thoda sochna chahiye! pic.twitter.com/ZYhAFPhpab
— Sanatani (@m_hindustaani) June 22, 2022
When will #Bollywood break the stereotype of having a Villian Flaunting Hindu symbols? Why just why?@yrf can you explain this? Shamless Actors can do anything for the sake of Money #sanjaydutt #RanbirKapoor
— TheWriterDeveloper (@TheWriterDev) June 23, 2022
Watched @yrf #ShamsheraTeaser and highly disappointed the way sacred hindu symbols tripundra and shikha have been used by them in designing the character of the villain played by @duttsanjay. The anti Hindu mindset of Bollywood continues.@karanmalhotra21 pic.twitter.com/K7Lr8Zn4yo
— अगस्त्योन्मुखः(అగస్తయోన్ముఖ અગસ્ત્યોન્મુખ) (@agastyonmukha28) June 22, 2022
This is perhaps the most thoughtful attack of Bollywood on Hindu UC.
— फ़ख़्र-ए-हिंद (@Fakhr_e_Hind) June 23, 2022
The Villain (Sanjay Dutt) name is “Shuddh Singh” with Brahminical visual identity.
This one character hits core of Sanatan Dharm.
BTW, trailer is not that great. Don’t think film can attract audiences. https://t.co/1rNVlQDNg2
Again..... Tripund in forehead. Why Hindu everytime, In British army no one had permission to perform their rituals. This character could've been without any religious symbols. @yrf@karanmalhotra21 why hearting hindu sentiments? @MIB_India #Hindutva
— Nitin Awasthi (@Nitin_avasthi) June 22, 2022
Shd #boycottshamshera