ಜೂ. 26: ಮಾದಕ ವಸ್ತುಗಳ ವಿಲೇವಾರಿ
ಮಂಗಳೂರು: ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನವು ಜೂ.೨೬ರಂದು ಪೂ.೧೧ಕ್ಕೆ ಮುಲ್ಕಿಯ ರಾಮ್ಕಿ ಎನರ್ಜಿ ಆ್ಯಂಡ್ ಎನ್ವಾಯರ್ಮೆಂಟ್ ಲಿ.ನಲ್ಲಿ ನಡೆಯಲಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ೧೫ಪೊಲೀಸ್ ಠಾಣೆಗಳ ೯೭ ಪ್ರಕರಣಗಳಿಗೆ ಸಂಬಂಧಿಸಿಂತೆ ೫೮೦.೮೬೦ಕೆಜಿ ಗಾಂಜಾ, ೨೫ ಗ್ರಾಂ ಹೆರಾಯಿನ್, 320 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ಈ ಸಂದರ್ಭ ವಿಲೇವಾರಿ ಮಾಡಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.
Next Story